ಇಂದು ( ಮೇ 4 ) ಏಪ್ರಿಲ್ ತಿಂಗಳಿನಲ್ಲಿ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ತಮಿಳುನಾಡು ರಾಜ್ಯದಲ್ಲಿ ಬಾರಿ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಏಕೆಂದರೆ ನಟ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷ ಮೊದಲ ಚುನಾವಣೆಯಲ್ಲೇ ಕ್ರಾಂತಿ ಮಾಡಿದ್ದು, ಆರಂಭದಿಂದಲೇ ಭಾರಿ ಮುನ್ನಡೆ ಪಡೆದುಕೊಂಡು ಸದ್ಯ 10.30ರ ಸಮಯಕ್ಕೆ ಟಿವಿಕೆ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಐಎಡಿಎಂಕೆ 74 ಸ್ಥಾನಗಳಲ್ಲಿ ಹಾಗೂ ಡಿಎಂಕೆ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 118 ಕ್ಷೇತ್ರಗಳನ್ನು ಗೆಲ್ಲಬೇಕಿದ್ದು, ಟಿವಿಕೆ ಪ್ರಚಂಡ ಮುನ್ನಡೆ ಕಾಯ್ದುಕೊಂಡ ಬೆನ್ನಲ್ಲೇ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ ಕಂಡು ಪಕ್ಷದ ಕಾರ್ಯಕರ್ತರು ನಿರಾಸೆಗೊಳಗಾಗಿದ್ದಾರೆ.
ತಮ್ಮ ಪಕ್ಷ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಚೆನ್ನೈನ ಕಚೇರಿ ಎದುರು ಕಾಯುತ್ತಿದ್ದ ಡಿಎಂಕೆ ಕಾರ್ಯಕರ್ತರು ನಿರಾಸೆಯಿಂದ ಜಾಗ ಖಾಲಿ ಮಾಡಿದ್ದಾರೆ. ಇನ್ನು ಕಚೇರಿ ಸಮೀಪ ಡಿಎಂಕೆ ವಿಜಯೋತ್ಸವಕ್ಕೆ ಹಾಕಲಾಗಿದ್ದ ಶಾಮಿಯಾನ ಮತ್ತು ವೇದಿಕೆಯನ್ನು ತೆರವುಗೊಳಿಸಲಾಗುತ್ತಿದೆ.

