HomeLatest Newsಸಿಎಂ ಗದ್ದುಗೆಗೆ ಲಕ್ಸುರಿ ಎಂಟ್ರಿ: ಚಂದ್ರಬಾಬು ನಾಯ್ಡು ಅವರನ್ನೇ ಮೀರಿಸಿ ದೇಶದ ಅತಿ ಶ್ರೀಮಂತ ಸಿಎಂ...

ಸಿಎಂ ಗದ್ದುಗೆಗೆ ಲಕ್ಸುರಿ ಎಂಟ್ರಿ: ಚಂದ್ರಬಾಬು ನಾಯ್ಡು ಅವರನ್ನೇ ಮೀರಿಸಿ ದೇಶದ ಅತಿ ಶ್ರೀಮಂತ ಸಿಎಂ ಆಗಲಿದ್ದಾರೆ ಬ್ರಾಂಡ್ ಡಿಕೆಶಿ

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿದ್ದು, ಜೂನ್ 3ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಪದಗ್ರಹಣದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಘೋಷಿತ ಆಸ್ತಿಯ ಆಧಾರದ ಮೇಲೆ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ದಾಖಲೆಯನ್ನು ಅವರು ಹಿಂದಿಕ್ಕಲಿದ್ದಾರೆ.

64 ವರ್ಷದ ಡಿ.ಕೆ. ಶಿವಕುಮಾರ್ (DKS) ಅವರು ಬರೋಬ್ಬರಿ 1,413 ಕೋಟಿ ರೂ. ಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಪ್ರಸ್ತುತ ದೇಶದ ಅತ್ಯಂತ ಶ್ರೀಮಂತ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರ ಆಸ್ತಿ 931 ಕೋಟಿ ರೂ. ಆಗಿದ್ದು, ಡಿ‌ಕೆಎಸ್ ಇವರನ್ನು ಮೀರಿಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ 640 ಕೋಟಿ ರೂ. ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಆಸ್ತಿ ವಿವರ:

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಅಫಿಡವಿಟ್ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ಒಟ್ಟು ಆಸ್ತಿ 1,413 ಕೋಟಿ ರೂ. ಆಗಿದ್ದು, ಇದು 2018ರಲ್ಲಿದ್ದ 840 ಕೋಟಿ ರೂ.ಗೆ ಹೋಲಿಸಿದರೆ ಗಣನೀಯವಾಗಿ ಏರಿಕೆಯಾಗಿದೆ.

ಚರ ಆಸ್ತಿ: 1,140 ಕೋಟಿ ರೂ.

ಸ್ಥಿರ ಆಸ್ತಿ: 273 ಕೋಟಿ ರೂ.

ಒಟ್ಟು ಸಾಲ (ಹೊಣೆಗಾರಿಕೆಗಳು): ಸುಮಾರು 265 ಕೋಟಿ ರೂ.

ದೇಶದ ಟಾಪ್ 10 ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ (ಜೂನ್ 2026ರ ಅಪ್ಡೇಟ್)

ವಿಶೇಷವೆಂದರೆ ದೇಶದ ಮೊದಲ ಮೂರು ಸ್ಥಾನಗಳಲ್ಲಿರುವ ಅತ್ಯಂತ ಶ್ರೀಮಂತ ಸಿಎಂಗಳೂ ದಕ್ಷಿಣ ಭಾರತದವರೇ ಆಗಿದ್ದಾರೆ ಆ ಕಂಪ್ಲೀಟ್ ಲಿಸ್ಟ್ ಇಲ್ಲಿದೆ:

ಡಿ.ಕೆ. ಶಿವಕುಮಾರ್ (ಕರ್ನಾಟಕ): ರೂ. 1,413 ಕೋಟಿ

ಎನ್. ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ): ರೂ. 931 ಕೋಟಿ

ಸಿ. ಜೋಸೆಫ್ ವಿಜಯ್ (ತಮಿಳುನಾಡು): ರೂ. 648 ಕೋಟಿ

ಪೆಮಾ ಖಂಡು (ಅರುಣಾಚಲ ಪ್ರದೇಶ): ರೂ. 332 ಕೋಟಿ

ನೆಫಿಯು ರಿಯೋ (ನಾಗಾಲ್ಯಾಂಡ್): ರೂ. 46 ಕೋಟಿ

ಡಾ. ಮೋಹನ್ ಯಾದವ್ (ಮಧ್ಯಪ್ರದೇಶ): ರೂ. 42 ಕೋಟಿ

ಎನ್. ರಂಗಸ್ವಾಮಿ (ಪುದುಚೇರಿ): ರೂ. 38 ಕೋಟಿ

ಎ. ರೇವಂತ್ ರೆಡ್ಡಿ (ತೆಲಂಗಾಣ): ರೂ. 30 ಕೋಟಿ

ಭೂಪೇಂದ್ರ ಪಟೇಲ್ (ಗುಜರಾತ್): ರೂ. 24 ಕೋಟಿ

ಪ್ರಮೋದ್ ಸಾವಂತ್ (ಗೋವಾ): ರೂ. 23 ಕೋಟಿ

ಸಂಪತ್ತಿನ ಜೊತೆ ಸ್ಟೈಲ್ ಐಕಾನ್ ಆದ ನೂತನ ಸಿಎಂ

ಸಾಮಾನ್ಯವಾಗಿ ರಾಜಕಾರಣಿಗಳು ಸರಳ ಉಡುಪು ಧರಿಸಿ ಸರಳತೆಯ ಇಮೇಜ್ ಕಾಪಾಡಿಕೊಳ್ಳಲು ಬಯಸುತ್ತಾರೆ. ಆದರೆ ಡಿ.ಕೆ. ಶಿವಕುಮಾರ್ ಈ ವಿಚಾರದಲ್ಲಿ ಸಂಪೂರ್ಣ ಭಿನ್ನ. ಅವರು ತಮ್ಮ ಶ್ರೀಮಂತಿಕೆಯನ್ನು ಅತ್ಯಂತ ಕ್ಲಾಸಿಕ್ ಆಗಿ ಧರಿಸುತ್ತಾರೆ! ಅವರ ವಾರ್ಡ್‌ರೋಬ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಐಷಾರಾಮಿ ಬ್ರಾಂಡ್‌ಗಳಾದ ಲೂಯಿ ವಿಟಾನ್ (Louis Vuitton), ಶನೆಲ್ (Chanel), ಪ್ರಾಡಾ (Prada), ಬರ್ಬೆರಿ (Burberry) ಮತ್ತು ಗುಸ್ಸಿ (Gucci) ಉಡುಪುಗಳಿಂದ ತುಂಬಿದೆ. ಇನ್ನು ಕೈಗಡಿಯಾರಗಳ ವಿಷಯಕ್ಕೆ ಬಂದರೆ ರೋಲೆಕ್ಸ್ (Rolex) ಮತ್ತು ಕಾರ್ಟಿಯರ್ (Cartier) ನಂತಹ ಪ್ರೀಮಿಯಂ ಬ್ರಾಂಡ್‌ಗಳನ್ನು ಇಷ್ಟಪಡುತ್ತಾರೆ. ಮತ್ತೊಂದು ವಿಶೇಷವೆಂದರೆ ಅವರ ಶರ್ಟ್ ಮತ್ತು ಕುರ್ತಾಗಳ ಮೇಲೆ ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ ‘dk’ ಮೊನೊಗ್ರಾಮ್ (ಲೋಗೋ) ಇರುತ್ತದೆ.

ಒಮ್ಮೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕಸ ವಿಂಗಡಣಾ ಘಟಕಕ್ಕೆ ಭೇಟಿ ನೀಡಿದ್ದಾಗಲೂ ಡಿ‌ಕೆಎಸ್ ತಮ್ಮ ಕುತ್ತಿಗೆಗೆ ಲೂಯಿ ವಿಟಾನ್ ಸ್ಕಾರ್ಫ್ ಧರಿಸಿ ಬಂದಿದ್ದರು, ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಈ ಸಂಪತ್ತಿನ ಬಹುಪಾಲು ಭಾಗ ಅವರಿಗೆ ತಂದೆ ಮತ್ತು ಅಜ್ಜಿಯ ವಿಲ್ (Will) ಮೂಲಕ ಬಂದ ಪಿತ್ರಾರ್ಜಿತ ಕೃಷಿ ಭೂಮಿ, ಹೂಡಿಕೆಗಳು ಮತ್ತು ಜಮೀನಿನ ಮೌಲ್ಯ ಹೆಚ್ಚಳದಿಂದ ಬಂದಿದೆ. ಬೆಂಗಳೂರು, ಮೈಸೂರು, ಕನಕಪುರ ಮತ್ತು ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇದರಲ್ಲಿ ಬೆಂಗಳೂರಿನ ಗೋಪಾಲಪುರದಲ್ಲಿರುವ ಮಾಲ್ (Mall) ಜಾಗವೂ ಸೇರಿದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಲ್ಲಿ ಜಮೀನಿನ ಬೆಲೆ ರಾಕೆಟ್ ವೇಗದಲ್ಲಿ ದುಬಾರಿಯಾಗಿರುವುದರಿಂದ ಇವರ ಆಸ್ತಿ ಮೌಲ್ಯವೂ ಕೋಟಿಗಟ್ಟಲೆ ಹೆಚ್ಕಾಗಿದೆ.

ತಮ್ಮ ಆಸ್ತಿಯ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಶಿವಕುಮಾರ್, “ನಾನು ಮತ್ತು ನನ್ನ ಕುಟುಂಬದ ಹೆಸರಿನಲ್ಲಿರುವ ಆಸ್ತಿಯನ್ನು ಅತ್ಯಂತ ಪಾರದರ್ಶಕವಾಗಿ ಘೋಷಿಸಿದ್ದೇನೆ. ದೇಶದ ಬೇರೆ ರಾಜಕಾರಣಿಗಳಂತೆ ನಾನು ಕಂಪನಿಗಳ ಹೆಸರಿನಲ್ಲಿ ಆಸ್ತಿ ಅಡಗಿಸಿಲ್ಲ, ಎಲ್ಲವನ್ನೂ ನೇರವಾಗಿಯೇ ಇಟ್ಟಿದ್ದೇನೆ” ಎಂದು ಹೇಳಿದ್ದರು.

ಇನ್ನು ಕರ್ನಾಟಕದ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ಕೂಡ 50 ಕೋಟಿ ರೂ. ಅಧಿಕ ಆಸ್ತಿಯೊಂದಿಗೆ ದೇಶದ ಟಾಪ್ 10 ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular