HomeKarnatakaಸಿಎಂ ಸ್ಥಾನ ಸಿಗದಿದ್ದರೆ ಡಿಸಿಎಂ ಸೇರಿ ಯಾವುದೇ ಸಚಿವ ಸ್ಥಾನ ಒಪ್ಪಿಕೊಳ್ಳಬೇಡಿ: ಡಿಕೆಶಿಗೆ ಬೆಂಬಲಿಗರ ಒತ್ತಡ

ಸಿಎಂ ಸ್ಥಾನ ಸಿಗದಿದ್ದರೆ ಡಿಸಿಎಂ ಸೇರಿ ಯಾವುದೇ ಸಚಿವ ಸ್ಥಾನ ಒಪ್ಪಿಕೊಳ್ಳಬೇಡಿ: ಡಿಕೆಶಿಗೆ ಬೆಂಬಲಿಗರ ಒತ್ತಡ

ಬೆಂಗಳೂರು: ಸಿಎಲ್‍ಪಿ ಸಭೆಗೂ ಮುನ್ನ ಸದಾಶಿವನಗರದ ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.

ಸುಮಾರು 50 -60 ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ಮುಖ್ಯಮಂತ್ರಿ ಸ್ಥಾನ ಇಲ್ಲದಿದ್ದರೆ ಉಪಮುಖ್ಯಮಂತ್ರಿ ಅಥವಾ ಬೇರೆ ಯಾವುದೇ ಸಚಿವ ಸ್ಥಾನ ಒಪ್ಪಿಕೊಳ್ಳಬೇಡಿ ಎಂದು ಡಿಕೆಶಿ ಮೇಲೆ ಬೆಂಬಲಿಗ ಶಾಸಕರು ಒತ್ತಡ ಹೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಗಿಪಟ್ಟು ಹಿಡಿದ ಬೆಂಬಲಿಗರು ಸಿಎಂ ಮಾಡದಿದ್ದರೆ ಸರ್ಕಾರದ ಭಾಗವಾಗಬೇಡಿ ಎಂದು ತಮ್ಮ ನಾಯಕನ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿ ಆದರೆ ನೀವೇ ಆಗಬೇಕು. ಇಲ್ಲದಿದ್ದರೆ ಬೇಡ ಎಂದು ಶಾಸಕಾಂಗ ಸಭೆಗೂ ಮುನ್ನ ಬೆಂಬಲಿಗ ಶಾಸಕರು ಡಿಕೆಶಿ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular