
ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿಕೆಶಿ ಸಿಎಂ ಆಗಬೇಕು ಅನ್ನೋದರಲ್ಲಿ ತಪ್ಪೇನಿದೆ. ಮನುಷ್ಯರ ಅನಿಸಿಕೆಗಳು ಇದ್ದೇ ಇರುತ್ತೆ. ಒಬ್ಬೊಬ್ಬರಿಗೆ ಒಂದೊಂದು ಹುದ್ದೆಯಲ್ಲಿ ಆಸೆ ಜಾಸ್ತಿ ಇರಬಹುದು. ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆನ್ನುವುದು ಬಹುಜನರ ಬಯಕೆಯಾಗಿದೆ ಎಂದರು.
ಮುಖ್ಯಮಂತ್ರಿ ಆಗಲು ಶಿವಕುಮಾರ್ಗೂ ಕೂಡ ಎಲ್ಲಾ ಅರ್ಹತೆ ಇದೆ. ಅವರು ಒಳ್ಳೆಯ ಸಂಘಟನೆ ಮಾಡ್ತಾರೆ. ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠಾವಂತರಿದ್ದಾರೆ ಎನ್ನುವ ಮೂಲಕ ಡಿಕೆಶಿ ಪರಸಚಿವ ಕೆ.ಎನ್.ರಾಜಣ್ಣ ಬ್ಯಾಟ್ ಬೀಸಿದರು.

