HomeLatest Newsಕೂಸು ಹುಟ್ಟೋ ಮುಂಚೆ ಕುಲಾವಿ ಹೊಲಿಸಿ ಕೆಟ್ಟ ಡಿಕೆ; ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅಲ್ಲ...

ಕೂಸು ಹುಟ್ಟೋ ಮುಂಚೆ ಕುಲಾವಿ ಹೊಲಿಸಿ ಕೆಟ್ಟ ಡಿಕೆ; ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅಲ್ಲ ನಾನೇ ಸಿಎಂ, ಆಗ ನಿಮ್ಮನ್ನು ದೊಡ್ಡ ಮಂತ್ರಿ ಮಾಡ್ತೇವೆ ಎಂದು ರೆಡ್ಡಿಗೆ ಮಾತು ಕೊಟ್ಟಿದ್ದ ಡಿಕೆ ಬ್ರದರ್ಸ್!

ಬೆಂಗಳೂರು: ಬಹು ನಿರೀಕ್ಷೆಯೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಾರಂಭದಲ್ಲೇ ವಿಘ್ನಗಳು ಎದುರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ.

ಸಂಪುಟಕ್ಕೆ ಸಾಕಷ್ಟು ಅನುಭವವುಳ್ಳ ಅನುಭವವುಳ್ಳ ಹಿರಿಯರನೇ ತೆಗೆದುಕೊಂಡಿದ್ದರೂ, ಸಚಿವ ರಾಮಲಿಂಗ ರೆಡ್ಡಿ ರಾಜೀನಾಮೆ ಪ್ರಹಸನ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಹಿರಿಯರು ಹಾಗೂ ಅಪಾರವಾದ ಅನುಭವವುಳ್ಳ ರಾಮಲಿಂಗ ರೆಡ್ಡಿ ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಸನ್ನಿವೇಶವನ್ನು ಸೃಷ್ಟಿ ಮಾಡದ ಸಜ್ಜನರು. ಅಂಥವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಬಂದಿದ್ದಾರೆ ಎಂದರೆ, ಇದು ಸಿಎಂ ಶಿವಕುಮಾರ್ ಅವರಿಗೆ ಬರುವ ದಿನಗಳಲ್ಲಿ ಎಚ್ಚರಿಕೆ ವಹಿಸಬೇಕೆಂಬ ಸಂದೇಶವನ್ನು ರವಾನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ನಗರ ಅಭಿವೃದ್ಧಿ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗ ರೆಡ್ಡಿ ಅವರಿಗೆ ಮುಂದೆ ತಾವು ಮುಖ್ಯಮಂತ್ರಿ ಆದರೆ ಇದೇ ಖಾತೆ ನೀಡುವುದಾಗಿ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ವಾಗ್ದಾನ ಮಾಡಿದ್ದರು ಎಂಬುದು!

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ರಾಮಲಿಂಗ ರೆಡ್ಡಿ ಬಳಿ ಡಿಕೆ ಸಹೋದರರು ಎರಡುವರೆ ವರ್ಷ ಆದ ನಂತರ ತಮಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕೆ ಸಿಗುತ್ತದೆ ಅವಾಗ ನಿಮ್ಮನ್ನು ಬೆಂಗಳೂರು ನಗರದ ಉಸ್ತುವಾರಿ ಮಂತ್ರಿ ಮಾಡುತ್ತೇವೆ ಎಂದು ವಾಗ್ದಾನ ಮಾಡಿದ್ದಾಗಿ ಅವರೇ ಹೇಳಿದ್ದಾರೆ.ಅಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಒಪ್ಪಂದ ಮೊದಲೇ ಆಗಿದ್ದು ಎಂಬುದು ಇದರಿಂದ ಗೊತ್ತಾಗುತ್ತದೆ.

ಬೆಂಗಳೂರು ಮೇಲೆ ಏಕೆ ಕಣ್ಣು?

ರಾಜಧಾನಿ ಬೆಂಗಳೂರು ನಗರ ಉಸ್ತುವಾರಿ ಆಗುವುದೆಂದರೆ ಅದೊಂದು ರೀತಿ ಎರಡನೇ ಮುಖ್ಯಮಂತ್ರಿ ಆದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇಕಡ 40ರಷ್ಟು ಆದಾಯ ಬೆಂಗಳೂರು ನಗರ ಒಂದರಿಂದಲೇ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತದೆ.

ವಾರ್ಷಿಕವಾಗಿ 8 ರಿಂದ 10 ಸಾವಿರ ಕೋಟಿ ವಾರ್ಷಿಕ ಬಜೆಟ್ ಮಂಡಿಸುವ ಬಿಬಿಎಂಪಿ. ಬಿಡಬ್ಲುಎಸ್ ಎಸ್ , ಬಿಡಿಎ ,ಬಿಎಂಪಿಎಂಆರ್‍ಸಿಎಲ್ ಸೇರಿದಂತೆ ಆಯಕಟ್ಟಿನ ಪ್ರಮುಖ ಸ್ಥಳಗಳು ಇದರ ವ್ಯಾಪ್ತಿಗೆ ಬರುತ್ತವೆ.ಮುಂಬೈ ಹೊರತುಪಡಿಸಿದರೆ ದೇಶದಲ್ಲಿ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಬಿಎ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ರಾಜಕಾರಣಿಗೆ ತಮ್ಮ ಜೀವನದ ಅದೃಷ್ಟ ಹಿಂದೆ ಭಾವಿಸುತ್ತಾರೆ. ಬೆಂಗಳೂರಿನ ನಗರ ಅಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಅಧಿಕಾರಯುತವಾದ ಖಾತೆಯೆಂದು ಪರಿಗಣಿಸಲ್ಪಟ್ಟಿದೆ.

ಆರ್ಥಿಕ ಶಕ್ತಿ ಮತ್ತು ಸಂಪನ್ಮೂಲ:

ಬೆಂಗಳೂರು ಕರ್ನಾಟಕದ ಆರ್ಥಿಕ ಎಂಜಿನ್ ಆಗಿದೆ. ರಾಜ್ಯದ ಹೆಚ್ಚಿನ ಆದಾಯವು ಈ ನಗರದಿಂದಲೇ ಬರುತ್ತದೆ. ನಗರ ಅಭಿವೃದ್ಧಿ ಇಲಾಖೆಯು ಸಾವಿರಾರು ಕೋಟಿ ರೂಪಾಯಿಗಳ ಬಜೆಟ್, ಬೃಹತ್ ಮೂಲಸೌಕರ್ಯ ಯೋಜನೆಗಳು, ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಹೀಗಾಗಿ, ಈ ಇಲಾಖೆಯನ್ನು ನಿರ್ವಹಿಸುವುದು ಅಪಾರ ಆರ್ಥಿಕ ಅಧಿಕಾರವನ್ನು ಹೊಂದಿರುವುದಕ್ಕೆ ಸಮಾನವಾಗಿದೆ.

ರಾಜಕೀಯ ಪ್ರಭಾವ ಮತ್ತು ಮತಬ್ಯಾಂಕ್:

ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಈ ಇಲಾಖೆಯು ಕೈಗೊಳ್ಳುವ ನಿರ್ಧಾರಗಳು (ರಸ್ತೆ, ಮೂಲಸೌಕರ್ಯ, ವಸತಿ ಯೋಜನೆಗಳು) ಲಕ್ಷಾಂತರ ಮತದಾರರ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಖಾತೆಯನ್ನು ಹೊಂದಿರುವ ಸಚಿವರು ನಗರದ ಅಭಿವೃದ್ಧಿಯ ಮುಖವಾಗಿ ಕಾಣಿಸಿಕೊಳ್ಳುವುದರಿಂದ, ಇದು ಅವರ ವರ್ಚಸ್ಸನ್ನು ಹೆಚ್ಚಿಸಲು ಮತ್ತು ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಗರದ ಬೆಳವಣಿಗೆಗೆ ಭೂಮಿಯ ಬಳಕೆ, ಲೇಔಟ್ ಅನುಮೋದನೆಗಳು ಮತ್ತು ದೊಡ್ಡ ಪ್ರಮಾಣದ ಯೋಜನೆಗಳ ಅನುಮೋದನೆಯು ಈ ಇಲಾಖೆಯ ಅಧೀನದಲ್ಲಿರುತ್ತದೆ. ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಲಯದಲ್ಲಿ ಈ ಇಲಾಖೆಯ ಪಾತ್ರ ನಿರ್ಣಾಯಕವಾಗಿರುತ್ತದೆ, ಇದು ಸಹಜವಾಗಿಯೇ ಹಲವರ ಆಸಕ್ತಿಗೆ ಕಾರಣವಾಗುತ್ತದೆ.

ಹಿಂದಿನಿಂದಲೂ ಮುಖ್ಯಮಂತ್ರಿಗಳು ಅಥವಾ ಹಿರಿಯ ಸಚಿವರೇ ಈ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಸಂಪ್ರದಾಯವಿತ್ತು. ಎಸ್‍ಎಂ ಕೃಷ್ಣ ಅವರ ಕಾಲದಿಂದ ಹಿಡಿದು ಇತ್ತೀಚಿನ ಸರ್ಕಾರಗಳವರೆಗೆ, ನಗರದ ಭವಿಷ್ಯ ರೂಪಿಸುವ ಜವಾಬ್ದಾರಿ ಈ ಖಾತೆಗೆ ಇರುವುದರಿಂದ, ಇದು ಸರ್ಕಾರದ ಅತ್ಯಂತ ‘ಹೈ-ಪ್ರೊಫೈಲ್’ ಖಾತೆಯಾಗಿ ಉಳಿದಿದೆ.

ನಗರ ಅಭಿವೃದ್ಧಿ ಇಲಾಖೆಯು ಕೇವಲ ಒಂದು ಆಡಳಿತಾತ್ಮಕ ವಿಭಾಗವಲ್ಲ, ಇದು ಬೆಂಗಳೂರಿನ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯ ಕೇಂದ್ರವಾಗಿದೆ. ಈ ಇಲಾಖೆಯು ರಾಜಕೀಯ ಅಧಿಕಾರ, ಆರ್ಥಿಕ ನಿರ್ವಹಣೆ ಮತ್ತು ಸಾರ್ವಜನಿಕ ಗೋಚರತೆಯನ್ನು ಒಟ್ಟಿಗೆ ಹೊಂದಿರುವುದರಿಂದ, ಯಾವುದೇ ನಾಯಕನಿಗೆ ಇದು ಅತ್ಯಂತ ಅಪೇಕ್ಷಣೀಯವಾದ ಖಾತೆಯಾಗಿರುತ್ತದೆ.

ಇಂತಹ ಮಹಾನಗರದ ಉಸ್ತುವಾರಿಯನ್ನು ರಾಮಲಿಂಗ ರೆಡ್ಡಿ ಅವರ ಹೆಗಲಿಗೆ ನೀಡುವುದಾಗಿ ಡಿಕೆಶಿ ಆಶ್ವಾಸನೆ ನೀಡಿದ್ದರು.ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ರಾಮಲಿಂಗ ರೆಡ್ಡಿಯವರಿಗೆ ಇಲ್ಲಿನ ಪ್ರತಿಯೊಂದು ಗಲ್ಲಿ ಗಲ್ಲಿಗಳು ಚಿರಪರಿಚಿತ ಮಹಾನಗರ ಪಾಲಿಕೆ ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆ ಸೇರಿದಂತೆ ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ತಮ್ಮ ಅಂಗೈನಷ್ಟೇ ಚಿರಪರಿಚಿತ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಮಲಿಂಗ ರೆಡ್ಡಿ ರೆಡಯ ಅವರು ಜಿಬಿಎ ಉಸ್ತುವಾರಿಯಾಗಿ ಡಿಕೆಶಿ ನಮ್ಮನ್ನು ನೇಮಕ ಮಾಡಲಿದ್ದಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು.ಬಿಬಿಎ ಚುನಾವಣೆಯನ್ನು ಸವಲಾಗಿ ಸ್ವೀಕರಿಸಿ ಗೆಲ್ಲಿಸಿ ಕೊಡಬೇಕೆಂಬ ಕಾರ್ಯತಂತ್ರವನ್ನು ಕೂಡ ರೆಡ್ಡಿ ರೂಪಿಸಿದ್ದರು ಎನ್ನುತ್ತೇವೆ ಆಪ್ತ ಮೂಲಗಳು.

ಮನವೊಲಿಕೆಗೆ ಪ್ರಯತ್ನ?

ಹಿರಿಯ ಸಚಿವ ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಪ್ರಯತ್ನಗಳನ್ನು ನಡೆಸಿದ್ದಾರೆ.

ಅಸಮಾಧಾನಗಳನ್ನು ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಸರ್ಕಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದು ಸರ್ಕಾರದ ಸುಸ್ಥಿರತೆಯ ಬಗ್ಗೆ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಕ್ಷಣವೇ ಕಾರ್ಯಪ್ರವೃತ್ತರಾದರು. ಕಳೆದ ರಾತ್ರಿ ರಾಮಲಿಂಗ ರೆಡ್ಡಿ ಇದ್ದ ಖಾಸಗಿ ಹೋಟೇಲೆ ಗೆ ಮಾತುಕತೆ ನಡೆಸಿದರು.

ಸಚಿವರ ಅಸಮಾಧಾನವನ್ನು ಆಲಿಸಿದ ನಾಯಕರು, ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ. ರಾಮಲಿಂಗ ರೆಡ್ಡಿ ಅವರು ಹಿರಿಯ ನಾಯಕರಾಗಿರುವುದರಿಂದ, ಪಕ್ಷದ ಮೇಲೆ ಮತ್ತು ಸರ್ಕಾರದ ವರ್ಚಸ್ಸಿನ ಮೇಲೆ ಅವರ ಪ್ರಭಾವ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಖಾತೆಯ ಭರವಸೆ ಮತ್ತು ನಿರಾಸೆ:

ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ, ಸರ್ಕಾರವು ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಖಾತೆಯನ್ನು ಹಂಚಿಕೆ ಮಾಡಿದೆ. ಇದೇ ಅವರ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ.

ತಮಗೆ ವಹಿಸಿದ ಜವಾಬ್ದಾರಿ ಮತ್ತು ಪಕ್ಷದ ವರಿಷ್ಠರು ನೀಡಿದ್ದ ಭರವಸೆಯ ನಡುವಿನ ವ್ಯತ್ಯಾಸದಿಂದ ತೀವ್ರ ನೋವಾಗಿದೆ ಎಂದು ಅವರು ವ್ಯಕ್ತಪಡಿಸಿದ್ದಾರೆ. “ಎಷ್ಟು ದಿನ ಈ ಅವಮಾನವನ್ನು ಸಹಿಸಿಕೊಳ್ಳಲಿ?” ಎಂದು ಅವರು ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ತಾವು ಯಾವುದೇ ಖಾತೆಗಾಗಿ ಲಾಬಿ ಮಾಡಿರಲಿಲ್ಲ, ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದಾಗ, ತಮ್ಮ “ಸಾಕ್ಷಿಪ್ರಜ್ಞೆಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ” ಎಂಬ ಕಾರಣ ನೀಡಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ.ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ತಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿ ಮುಂದುವರಿಯುವುದಾಗಿ ಮತ್ತು ಪಕ್ಷದಲ್ಲೇ ಇರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಈ ಬೆಳವಣಿಗೆಯು ಆರಂಭಿಕ ಹಂತದಲ್ಲಿಯೇ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular