ಜೂನ್ ನಿಂದ ಡಿಜಿಟಲ್ ವ್ಯವಸ್ಥೆಯ ಮೂಲಕವೇ ಕಂದಾಯ ಭೂದಾಖಲೆಗಳ ವಿತರಣೆ ಕಡ್ಡಾಯ

ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕವೇ ಡಿಜಿಟಲ್ ಭೂ ದಾಖಲೆಗಳ ವಿತರಣೆ ಮಾಡಲಾಗುತ್ತದೆ.

  ಕಂದಾಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕವೇ ಜಾರಿಗೆ ತರುವ ಉದ್ದೇಶದಿಂದ ಪ್ರಾರಂಭಿಕ ಹಂತದಲ್ಲಿ ಪ್ರತಿ ದಿನ ಕನಿಷ್ಠ 10 ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಪಡೆದು, ಡಿಜಿಟಲ್ ಪ್ರತಿಗಳನ್ನು ತಂತ್ರಾಂಶದಲ್ಲಿಯೇ 2 ದಿನಗಳೊಳಗಾಗಿ ನೀಡಲು, ದಾಖಲೆಯು ಸ್ಕ್ಯಾನಿಂಗ್ ಆಗದೇ ಇದ್ದಲ್ಲಿ 7 ದಿನಗಳೊಳಗಾಗಿ ಸ್ಕ್ಯಾನಿಂಗ್ ಮಾಡಿ ಡಿಜಿಟಲ್ ಪ್ರತಿಯನ್ನೇ ಸಾರ್ವಜನಿಕರಿಗೆ ವಿತರಿಸಬೇಕು.

 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ತಿಳಿಸಲಾಗಿದ್ದು ಜೂನ್ 2025 ರ ನಂತರ ಕಡ್ಡಾಯವಾಗಿ ಕಂದಾಯ ದಾಖಲೆಗಳನ್ನು ಡಿಜಿಟಲ್ ಭೂ ದಾಖಲೆಗಳ ವಿತರಣೆ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುವುದು.

 ಈ ಜಿಲ್ಲೆಯ ಎಲ್ಲಾ ಕಂದಾಯ ಕಚೇರಿಗಳ ಅಭಿಲೇಖಾಲಯಗಳಲ್ಲಿ ನೀಡುವ ದೃಢೀಕೃತ ನಕಲು ಪ್ರತಿಗಳನ್ನು ಕಡ್ಡಾಯವಾಗಿ ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುವುದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read