ಸಿಂಗಾಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳನೊಬ್ಬ ಮಹಿಳೆಯ ಒಳ ಉಡುಪುಗಳನ್ನು ಕದ್ದು, ನಂತರ ಅವುಗಳನ್ನು ವಾಪಸ್ ಇಟ್ಟಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಏನಿದು ಘಟನೆ ?
ಎಲಿವಿ ಲಿಮ್ ಎಂಬ ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಮನೆಯ ಹೊರಗೆ ಒಣಗಲು ಹಾಕಿದ್ದ ಬಟ್ಟೆಗಳಿಂದ ಒಳ ಉಡುಪುಗಳು ಪದೇ ಪದೇ ಕಾಣೆಯಾಗುತ್ತಿದ್ದವು. ಅನುಮಾನಗೊಂಡ ಅವರು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರು. ಆಗ ಕಳ್ಳನೊಬ್ಬ ಬಟ್ಟೆ ಒಣಗಿಸುವ ಸ್ಟ್ಯಾಂಡ್‌ನಿಂದ ಒಳ ಉಡುಪುಗಳನ್ನು ಕದಿಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಯಿತು.
ವಿಡಿಯೋದಲ್ಲಿ ಏನಿದೆ ?
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಟ್ಟೆ ಒಣಗಿಸುವ ಸ್ಟ್ಯಾಂಡ್ ಬಳಿ ಬರುತ್ತಾನೆ ಅಲ್ಲಿಂದ ಒಂದು ಒಳ ಉಡುಪನ್ನು ತೆಗೆದು ತಮ್ಮ ಪ್ಯಾಂಟ್‌ನಲ್ಲಿ ಹಾಕಿಕೊಳ್ಳುತ್ತಾರೆ. ನಂತರ ಅವನು ಹಿಂತಿರುಗಿ ಹೋಗುವಾಗ ಕ್ಯಾಮೆರಾವನ್ನು ನೋಡಿದ್ದು ಕೂಡಲೇ ತನ್ನ ಪ್ಯಾಂಟ್‌ನಲ್ಲಿದ್ದ ಒಳ ಉಡುಪನ್ನು ತೆಗೆದು ಮತ್ತೆ ಸ್ಟ್ಯಾಂಡ್‌ನಲ್ಲಿ ಇಡುತ್ತಾನೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳ್ಳನ ಈ ಕೃತ್ಯವನ್ನು ಖಂಡಿಸಿ, ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳನ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.