ಟಾಟಾ ಮೋಟಾರ್ಸ್ ಆಯ್ದ ವಾಹನಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ 65 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್​ ನೀಡುತ್ತಿದೆ.

ಕಂಪೆನಿಯು 2022 ಮತ್ತು 2023 ರಲ್ಲಿ ತಯಾರಾದ ಈ ಮಾದರಿಗಳ ಮೇಲೆ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಅನ್ನು ನೀಡುತ್ತಿದೆ ಎಂದು ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ, ಸೀಮಿತ ಅವಧಿಗೆ ಲಭ್ಯವಿರುವ ವಿವಿಧ ಕೊಡುಗೆ ಇದಾಗಿದೆ.

Tata Altroz ​​2023 ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್​ಗಳು 25 ಸಾವಿರ ರೂ. ವರೆಗೆ ರಿಯಾಯಿತಿ ಲಭ್ಯವಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ವಯಂಚಾಲಿತ ವೇರಿಯೆಂಟ್​ಗಳ ಮೇಲೆ ರೂ.25,000 ವರೆಗೆ ರಿಯಾಯಿತಿ ಇದೆ. 2022 ಸ್ಟಾಕ್ ಪೆಟ್ರೋಲ್ ವೇರಿಯೆಂಟ್​ ಮೇಲೆ ರೂ.20,000 ಮತ್ತು ಡೀಸೆಲ್ ವೇರಿಯೆಂಟ್​ ಮೇಲೆ ರೂ.35,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.

2022 DCA ಪೆಟ್ರೋಲ್ ಆಟೋಮ್ಯಾಟಿಕ್ Altroz ​​ಮಾದರಿಯು ರೂ.30,000 ರಿಯಾಯಿತಿಯೊಂದಿಗೆ ಬರುತ್ತದೆ. ಟಾಟಾ ಆಲ್ಟ್ರೋಜ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಐ20 ಮತ್ತು ಟೊಯೊಟಾ ಗ್ಲಾನ್ಜಾದಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ. ಟಾಟಾ ಮೋಟಾರ್ಸ್​ನ ಟಿಯಾಗೊ ಹ್ಯಾಚ್‌ಬ್ಯಾಕ್ ಸಿಎನ್‌ಜಿ ರೂಪಾಂತರದ ಮೇಲೆ ರೂ.30 ಸಾವಿರದವರೆಗೆ ರಿಯಾಯಿತಿ ಇದೆ. ಪೆಟ್ರೋಲ್ ರೂಪಾಂತರದ ಮೇಲೆ 25,000 ರೂ.ಗಳ ರಿಯಾಯಿತಿ ಲಭ್ಯವಿದೆ.

ಟಾಟಾ ಹ್ಯಾರಿಯರ್ ವಾಹನ ರೂ. 10,000 ನಗದು ರಿಯಾಯಿತಿ, ರೂ. 25,000 ವಿನಿಮಯ ರಿಯಾಯಿತಿ ಒಳಗೊಂಡಿದೆ. ಅಂದರೆ ಒಟ್ಟು ರೂ. 35,000 ವಾಹನದ ಬೆಲೆಯನ್ನು ಕಡಿಮೆ ಮಾಡುತ್ತದೆ. ಟಾಟಾ ಸಫಾರಿ SUV ವೇರಿಯೆಂಟ್​ರೂ.35,000 ರ ಒಟ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ.

ಇತ್ತೀಚಿನ ಮಾದರಿಯ ಟಾಟಾ ಸಫಾರಿ ವಾಹನವನ್ನು ರೂ.10,000 ನಗದು ರಿಯಾಯಿತಿ ಮತ್ತು ರೂ.25,000 ವಿನಿಮಯ ರಿಯಾಯಿತಿಯೊಂದಿಗೆ ಖರೀದಿಸಬಹುದು. ಟಾಟಾ ಮೋಟಾರ್ಸ್ ಸಫಾರಿ 2022 ಸ್ಟಾಕ್ ಕಾರಿಗೆ ರೂ. 65,000 ರಿಯಾಯಿತಿಗಳು ಲಭ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read