HomeEntertainmentಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಎ. ಹರ್ಷ

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ಎ. ಹರ್ಷ

ಇಟಲಿಯಲ್ಲಿ ಪಾಸ್ ಪೋರ್ಟ್ ಕಳೆದುಕೊಂಡ 'ಭಜರಂಗಿ' ನಿರ್ದೇಶಕ- Kannada Prabha

ಖ್ಯಾತ ನಿರ್ದೇಶಕ ಎ. ಹರ್ಷ ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2004ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್ ಎಸ್ ಎಲ್ ಸಿ’ ಚಿತ್ರದಲ್ಲಿ ಕೊರಿಯೋಗ್ರಾಫರ್ ಆಗುವ ಮೂಲಕ ಎ. ಹರ್ಷ ತಮ್ಮ ಸಿನಿ ಪಯಣ ಆರಂಭಿಸಿದರು.

ನಂತರ 2005ರಲ್ಲಿ ಬಿಡುಗಡೆಯಾದ ‘ಕಾಶಿ ಫ್ರಮ್ ವಿಲೇಜ್’ ಸಿನಿಮಾದಲ್ಲಿ ಸುದೀಪ್ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡರು. 2007ರಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ತರುಣ್ ಒಟ್ಟಾಗಿ ಅಭಿನಯಿಸಿದ್ದ ‘ಗೆಳೆಯ’ ಚಿತ್ರವನ್ನು ಮೊದಲ ಬಾರಿ ನಿರ್ದೇಶಿಸಿದರು, ನಂತರ ಸಾಕಷ್ಟು ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರ್ದೇಶಕ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಸಾಕಷ್ಟು ಹೆಸರು ಮಾಡಿರುವ ಹರ್ಷ ಮೊದಲ ಬಾರಿ ಟಾಲಿವುಡ್ ನ ‘ಭೀಮ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇಂದು ಎ. ಹರ್ಷ 43ನೇ ವಸಂತಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್ ವುಡ್ ನ  ಸಿನಿ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular