JOB ALERT : ‘ಆರೋಗ್ಯ  ಇಲಾಖೆ’ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಜು.11 ರಂದು ನೇರ ಸಂದರ್ಶನ

ಬಳ್ಳಾರಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2025-26 ನೇ ಸಾಲಿಗೆ ವಿವಿಧ ಕಾರ್ಯಕ್ರಮಗಳಡಿ ಮಂಜೂರಾಗಿ ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 11 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಹುದ್ದೆಗಳ ವಿವರ:
ಮಕ್ಕಳ ಆರೋಗ್ಯ ವಿಭಾಗ-01(ಎಂಬಿಬಿಎಸ್), ಇ-ಆಸ್ಪತ್ರೆ ವಿಭಾಗ-02(ಎಂಬಿಬಿಎಸ್), ಎಸ್ಎನ್ಸಿಯು ವಿಭಾಗ-06(ಎಂಬಿಬಿಎಸ್), ತಾಯಿ ಆರೋಗ್ಯ ವಿಭಾಗ-02(ಎಂಬಿಬಿಎಸ್), ಎನ್ಸಿಡಿ ವಿಭಾಗ-05(ಎಂಬಿಬಿಎಸ್), ಎನ್ಯುಹೆಚ್ಎಂ ವಿಭಾಗ-02(ಎಂಬಿಬಿಎಸ್), ನಮ್ಮ ಕ್ಲಿನಿಕ್-03(ಎಂಬಿಬಿಎಸ್) ಸೇರಿ ಒಟ್ಟು 21 ಮತ್ತು ಮಕ್ಕಳ ತಜ್ಞ ವೈದ್ಯರು-01, ಇತರೆ ತಜ್ಞ ವೈದ್ಯರು-01.

ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಜುಲೈ 11 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಗುತ್ತಿಗೆ ಆಧಾರದ ನೇಮಕಾತಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಯಮಾನುಸಾರ ಗುತ್ತಿಗೆ ಆಧಾರದ ಮೇಲೆ ಮೇರಿಟ್ ಕಮ್ ರೋಷ್ಟರ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಗುತ್ತಿಗೆ ಆಧಾರದ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಮಾಹಿತಿಗಾಗಿ www.Ballari.nic.in ಅಂತರ್ ಜಾಲಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.

ವಿಶೇಷ ಸೂಚನೆ: ಜುಲೈ-2025 ರಿಂದ ಮಾರ್ಚ್-2026 ರ ವರೆಗೆ ಭರ್ತಿ ಆಗಿರುವ ಹುದ್ದೆಗಳು ಖಾಲಿ ಆದಲ್ಲಿ ಪ್ರತಿ ದಿನ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಾರ್ಯಾಲಯ, ಬಳ್ಳಾರಿ ಅಥವಾ ಮೊ.9449843102 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read