BREAKING : ಹಳ್ಳಿಕಾರ್ ಒಡೆಯ ‘ವರ್ತೂರು ಸಂತೋಷ್’ ಗೆ ಸಂಕಷ್ಟ ; ಮತ್ತೊಂದು ಪ್ರಕರಣ ದಾಖಲು..!

ಬೆಂಗಳೂರು : ಹಳ್ಳಿಕಾರ್ ಒಡೆಯ ‘ವರ್ತೂರು ಸಂತೋಷ್’ ಗೆ ಸಂಕಷ್ಟ ಎದುರಾಗಿದ್ದ, ಮತ್ತೊಂದು ಪ್ರಕರಣ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿ ಬಂಧನಕ್ಕೊಳಗಾಗಿದ್ದ ವರ್ತೂರು ಸಂತೋಷ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ವರ್ತೂರ್ ಸಂತೋಷ್ ಪ್ರಾಣಿಗಳ ಸಾಗಾಣಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. SPCA ಪ್ರಾಣಿ ಕಲ್ಯಾಣ ಅಧಿಕಾರಿ (SPCA animal welfare officer) ಹರೀಶ್ ಎನ್ನುವವರು ಈ ಸಂಬಂಧ ದೂರು ನೀಡಿದ್ದಾರೆ.

ವರ್ತೂರು ಸಂತೋಷ್ ನೇತೃತ್ವದಲ್ಲಿ ವರ್ತೂರಿನಲ್ಲಿ ಹಳ್ಳಿಕಾರ್ ರೇಸ್ ಆಯೋಜನೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ವರ್ತೂರು ಸಂತೋಷ್’ ಗೆ ಸಂಕಷ್ಟ ಎದುರಾಗಿದೆ. ಹಳ್ಳಿಕಾರ್ ಹಸುಗಳನ್ನು ವಾಹನದಲ್ಲಿ ಸಾಗಾಣಿಕೆ ಮಾಡುವಾಗ ವರ್ತೂರು ಸಂತೋಷ್ ಹಾಗೂ ತಂಡ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ಒಂದು ಟ್ರಕ್ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಲಗೇಜ್ ಇಟ್ಟು ಫಾರ್ಮ್ ಹೌಸ್ನಿಂದ ಸಾಗಾಟ ಮಾಡಿರುವ ಆರೋಪ ಕೇಳಿಬಂದಿದೆ. ದೂರು ನೀಡಿರುವ ಹರೀಶ್ ಎಫ್ ಐ ಆರ್ ದಾಖಲಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read