HomeInternationalಡಯಟ್ ಸೋಡಾ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ : ಡೊನಾಲ್ಡ್ ಟ್ರಂಪ್ ಅವರ ವಿಚಿತ್ರ ನಂಬಿಕೆ ಬಗ್ಗೆ...

ಡಯಟ್ ಸೋಡಾ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ : ಡೊನಾಲ್ಡ್ ಟ್ರಂಪ್ ಅವರ ವಿಚಿತ್ರ ನಂಬಿಕೆ ಬಗ್ಗೆ ಡಾ. ಓಜ್ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹಾರ ಪದ್ಧತಿ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಯಟ್ ಸೋಡಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಇದು ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಟ್ರಂಪ್ ಪ್ರತಿಪಾದಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಅಮೆರಿಕದ ಪ್ರಸಿದ್ಧ ವೈದ್ಯ ಡಾ. ಮೆಹ್ಮತ್ ಓಜ್ ಬಹಿರಂಗಪಡಿಸಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ ಬಯಲಾದ ಸೀಕ್ರೆಟ್

ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಡಾ. ಓಜ್, ಶ್ವೇತಭವನದಲ್ಲಿ ಅಧ್ಯಕ್ಷರೊಂದಿಗೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರಂಪ್ ಅವರ ವಿಲಕ್ಷಣ ತರ್ಕ ಹೀಗಿದೆ:

ಸೋಡಾವನ್ನು ಹುಲ್ಲಿನ ಮೇಲೆ ಹಾಕಿದಾಗ ಅದು ಹುಲ್ಲನ್ನು ಕೊಲ್ಲುತ್ತದೆ. ಹಾಗೆಯೇ ನಮ್ಮ ದೇಹಕ್ಕೆ ಹೋದಾಗ ಅದು ಅಲ್ಲಿನ ಕ್ಯಾನ್ಸರ್ ಕಾರಕ ಕೋಶಗಳನ್ನು (Cells) ಸಹ ಕೊಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಟ್ರಂಪ್ ವಾದಿಸುತ್ತಾರಂತೆ. ಇತ್ತೀಚೆಗೆ ಏರ್‌ಪೋರ್ಸ್ ಒನ್ ವಿಮಾನದಲ್ಲಿ ಕಿತ್ತಳೆ ಸೋಡಾ ಕುಡಿಯುವಾಗಲೂ ಅವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ಓಜ್ ತಿಳಿಸಿದ್ದಾರೆ.

ತಜ್ಞರ ಎಚ್ಚರಿಕೆ: ಇದು ಕೇವಲ ಮಿಥ್ಯೆ

ಟ್ರಂಪ್ ಅವರ ಈ ಹೇಳಿಕೆ ವೈದ್ಯಕೀಯ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಕ್ಯಾನ್ಸರ್ ತಜ್ಞ ಡಾ. ಸಂದೀಪ್ ನಾಯಕ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೋಡಾದಿಂದ ಕ್ಯಾನ್ಸರ್ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ.

ಸೋಡಾ ಅಪಾಯಕಾರಿ: ಸೋಡಾದಲ್ಲಿರುವ ಅಧಿಕ ಒತ್ತಡದ ಕಾರ್ಬನ್ ಮತ್ತು ರಾಸಾಯನಿಕಗಳು ದೇಹಕ್ಕೆ ಹಾನಿಯುಂಟುಮಾಡುತ್ತವೆ.

ವೈಜ್ಞಾನಿಕ ವಿಧಾನಗಳೇ ಮದ್ದು: ಕ್ಯಾನ್ಸರ್ ಹೋಗಲಾಡಿಸಲು ಸರ್ಜರಿ, ಕಿಮೋಥೆರಪಿ ಮತ್ತು ರೇಡಿಯೋ ಚಿಕಿತ್ಸೆಯಂತಹ ವೈಜ್ಞಾನಿಕ ವಿಧಾನಗಳೇ ಅಂತಿಮ.

ಆರೋಗ್ಯದ ಮೇಲೆ ಪರಿಣಾಮ: ಅತಿಯಾದ ಡಯಟ್ ಸೋಡಾ ಸೇವನೆಯು ತೂಕ ಹೆಚ್ಚಾಗುವಿಕೆ ಮತ್ತು ಟೈಪ್ 2 ಮಧುಮೇಹಕ್ಕೆ (Insulin Resistance) ಕಾರಣವಾಗಬಹುದು ಎಂದು ಅಧ್ಯಯನಗಳು ಹೇಳಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular