ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತೋರಿಸಿರುವ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸುವುದನ್ನು ಬಿಟ್ಟು ಎಸ್ ಐಟಿ ತಂಡ ದೂರುದಾರ ತೋರಿಸಿರುವ ಹೊಸ ಸ್ಥಳ, 15ನೇ ಪಾಯಿಂಟ್ ನಲ್ಲಿ ಶೋಧಕ್ಕೆ ಮುಂದಾಗಿದೆ.
ಎಸ್ ಐಟಿ ಅಧಿಕಾರಿಗಳು ಈವರೆಗೆ ದೂರುದಾರ ತೋರಿಸಿರುವ ಪಾಯಿಂಟ್ ಗಳಲ್ಲಿ ಅಸ್ಥಿಪಂಜರಕ್ಕಾಗಿ ಶೋಧಕಾರ್ಯಾಚರಣೆ ನಡೆಸಿದ್ದಾರೆ. 13ನೇ ಪಾಯಿಂಟ್ ನಲ್ಲಿ ಇಂದು ಶೋಧಕಾರ್ಯಾಚರಣೆ ನಡೆಸುವ ನಿರೀಕ್ಷೆ ಇತ್ತು. ಆದರೆ 13ನೇ ಪಾಯಿಂಟ್ ಬಿಟ್ಟು ಇದೀಗ ದೂರುದಾರ ಹೊಸದೊಂದು ಜಾಗ ತೋರಿಸಿದ್ದು, ಅಲ್ಲಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.
ದೂರುದಾರನೊಂದಿಗೆ ಎಸ್ ಐಟಿ ತಂಡ ಧರ್ಮಸ್ಥಳ ಗ್ರಾಮದ ಬೊಳಿಯಾರ್ ಕಾಡಿನೊಳಗೆ ತೆರಳಿ ಅಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ದೂರುದಾರ ನೇತ್ರಾವತಿ ನದಿ ದಡದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ 13 ಸ್ಥಳಗಳನ್ನು ತೋರಿಸಿದ್ದ. ಇಂದು 13ನೇ ಸ್ಥಳದಲ್ಲಿ ಶೋಧ ನಡೆಸಬೇಕಾಗಿತ್ತು. ಆದರೆ 13ನೇ ಸ್ಥಳವನ್ನು ಬಿಟ್ಟು ಇದೀಗ 15ನೇ ಸ್ಥಳದಲ್ಲಿ ಶೋಧಕಾರ್ಯಾಚರಣೆ ನಡೆಸುತ್ತಿದೆ.