ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ದೂರುದಾರ ತೀರಿಸಿರುವ ಸ್ಥಳಗಳಲ್ಲಿ ಉತ್ಖನನದ ಮೂಲಕ ಅಸ್ಥಿಪಂಜರಗಳ ಹುಡುಕಾಟ ನಡೆಸಲಾಗುತ್ತಿದೆ.
ದೂರುದಾರ ತೋರಿಸಿರುವ 7ನೇ ಜಾಗದಲ್ಲಿ ಇಂದು ಶೋಧಕಾರ್ಯ ನಡೆಸಲಾಗಿದ್ದು, 7ನೇ ಪಾಯಿಂಟ್ ನಲ್ಲಿ ಕರವಸ್ತ್ರ ಪತ್ತೆಯಾಗಿದೆ. ಕರವಸ್ತ್ರವನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನು 7ನೇ ಪಾಯಿಂಟ್ ನಲ್ಲಿ ಯಾವುದೇ ಅಸ್ಥಿಪಂಜರ ಅಥವಾ ಮೂಳೆಗಳು ಪತ್ತೆಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಿನ್ನೆ 6 ನೇ ಪಾಯಿಂಟ್ ನಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಇಡೀದಾದ ಅಸ್ಥಿಪಂಜರ ಪತ್ತೆಯಾಗಿದ್ದು, ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.