ವಿಜಯಪುರ: ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ವಿಜಯೇಂದ್ರಗೆ ಬೇರೆ ಬಂಡವಾಳ ಇಲ್ಲ. ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.
ಧರ್ಮಸ್ಥಳ ವಿಚಾರದಲ್ಲಿ ನಾವು ಎಸ್ ಐಟಿ ರಚಿಸಿದಾಗ ಆರಂಭದಲ್ಲಿ ಬಿಜೆಪಿಯವರು ಸ್ವಾಗತ ಮಾಡಿದರು. ಆದರೆ ಮುಸುಕುಧಾರಿ ತೋರ್ಸಿದ ಜಾಗದಲ್ಲಿ ಏನೂ ಸಿಗದೇ ಇದ್ದಾಗ ಇದೀಗ ತಿರುಗಿ ಬಿದ್ದಿದ್ದಾರೆ. ವಿಜಯೇಂದ್ರಗೆ ಬೇರೆ ಬಂಡವಾಳವಿಲ್ಲ. ಅಪಪ್ರಚಾರ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಜಾಗದಲ್ಲಿ ಬಿಜೆಪಿಯವರಿದ್ದರೂ ಎಸ್ ಐಟಿ ರಚಿಸುತ್ತಿದ್ದರು. ಆದರೆ ಈಗ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ. ನಾವು ಎಸ್ ಐಟಿ ರಚನೆ ಮಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಾನ ಹಾಗೂ ಧರ್ಮದರ್ಶಿಗಳ ಮೇಲೆ ಇದ್ದಂತಹ ಕಳಂಕವನ್ನು ತೆಗೆದುಹಾಕಿದ್ದೇವೆ. ಜನರ ನಂಬಿಕೆಯನ್ನು ಹೆಚ್ಚಿಸಿದ್ದೇವೆ ಎಂದರು.