ಧರ್ಮಸ್ಥಳ : ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ‘ಜಿಪಿಆರ್’ (GPR) ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್ ಐ ಟಿ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ತಜ್ಞರ ಜೊತೆ ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸಭೆ ನಡೆಸಿದ್ದು, ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ತಜ್ಞರಿಂದ ಸಲಹೆ ಪಡೆದಿದ್ದಾರೆ. ಭೂಮಿ ಅಗೆಯುವ ಬದಲು ಜಿಪಿಆರ್’ ತಂತ್ರಜ್ಞಾನದ ಮೂಲಕ ಅಸ್ಥಿಪಂಜರ ಪತ್ತೆಗೆ ಎಸ್ ಐ ಟಿ ಸಿದ್ದತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ .ಜಿಪಿಆರ್ ತಂತ್ರಜ್ಞರ ಅಭಿಪ್ರಾಯ ಪಡೆದು ಎಸ್ ಐ ಟಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಶೋಧಕಾರ್ಯ ಮುಂದುವರೆಸಿದ್ದು, ಈವರೆಗೂ ಗುರುತಿಸದ ಸ್ಥಳದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಚುರುಕುಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಧರ್ಮಸ್ಥಳದ ಬಂಗ್ಲಗುಡ್ಡದ ಸ್ಥಳದಲ್ಲಿ ದೂರುದಾರ ತೋರಿದ್ದ 11ನೇ ಪಾಯಿಂಟ್ ನ ಬಳಿಯಿರುವ ಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಲಾಗಿದೆ. ದೂರುದಾರ ಶವಗಳನ್ನು ಹೂತಿಟ್ಟುರುವುದಾಗಿ ಈವರೆಗೆ 13 ಸ್ಥಳಗಳನ್ನು ತೋರಿಸಿದ್ದ. ಈ ನಿಟ್ಟಿನಲ್ಲಿ 13 ಸ್ಥಳಗಳನ್ನು ಪಟ್ಟಿಮಾಡಿ ಶೋಧ ನಡೆಸಲಾಗುತ್ತಿತ್ತು. ಈ ಮಧ್ಯೆ ದೂರುದಾರ ಗುರುತು ಮಾಡದ ಬಂಗ್ಲಗುಡ್ಡದ ಮತ್ತೊಂದು ಸ್ಥಳದಲ್ಲಿ ಶವ ಹೂತಿಟ್ಟ ಬಗ್ಗೆ ಮಾಹಿತಿ ನೀಡಿದ್ದ. ಅಲ್ಲಿ ನಡೆದ ಶೋಧದ ವೇಳೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಈ ನಿಟ್ಟಿನಲ್ಲಿ 13ನೇ ಸ್ಥಳದಲ್ಲಿ ಶೋಧ ನಡೆಸುವ ಬದಲು ಬಂಗ್ಲಗುಡ್ಡದ ಸ್ಥಳದಲ್ಲಿ 11A ಎಂದು ಸ್ಥಳ ಪತ್ತೆಮಾಡಿ ಎಸ್ ಐಟಿ ತಂಡ ಶೋಧಕಾರ್ಯ ನಡೆಸಿದೆ.