ಮಂಗಳೂರು: ಧರ್ಮಸ್ಥಳದ ನೇತ್ರಾವತಿ ನದಿ ದಡದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿರುವ 6ನೇ ಸ್ಥಳದಲ್ಲಿ ಮೂಲೆಗಳು ಪತ್ತೆಯಾಗಿದ್ದು, ಪುರುಷನ ಮೃತದೇಹದ ಮೂಳೆಗಳು ಎಂದು ತಿಳಿದುಬಂದಿದೆ.
ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ಇಂದು ಶೋಧಕಾರ್ಯಾಚರಣೆ ವೇಳೆ 7-8 ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.
ಮೂಳೆಗಳು ಪತ್ತೆಯಾಗಿರುವ 6ನೇ ಪಾಯಿಂಟ್ ಸ್ಥಳವನ್ನು ಸಂರಕ್ಷಿತ ಜಾಗ ಎಂದು ಎಸ್ ಐಟು ಗುರುತು ಮಾಡಿದೆ. ಒಟ್ಟಾರೆ ದೂರುದಾರ ತೋರಿಸಿರುವ 6ನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.
You Might Also Like
TAGGED:ಧರ್ಮಸ್ಥಳ ಪ್ರಕರಣ