ಬೆಂಗಳೂರು: ಧರ್ಮಸ್ಥಳ ವಿಚಾರವಾಗಿ ಬಿಜೆಪಿ ನಾಯಕರು ಧರ್ಮರಕ್ಷಣೆ ಹೋರಾಟ ನಡೆಸಿ ಈಗ ಮೌನವಾಗಿದ್ದೇಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಚಲೋ ನಡೆಸಿದ್ದ ಬಿಜೆಪಿಯವರು, ಧರ್ಮಸ್ಥಳ ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳದ ಬಗ್ಗೆ ಏಕಾಏಕಿ ಮೌನವಾಗಿದ್ದೇಕೆ? ಬಿಜೆಪಿಯವರ ಧರ್ಮರಕ್ಷಣೆಯ ನಾಟಕ ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ? ಎಂದು ಕೇಳಿದ್ದಾರೆ.
ಸೌಜನ್ಯಾ ಸಂಬಂಧಿ ವಿಠಲಗೌಡ ಅವರು ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳ ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತಿದೆ ಎಂದು ವರದಿಗಳು ಹೇಳಿತ್ತಿವೆ. ಸೌಜನ್ಯಾ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಯ ಬಗ್ಗೆ ಏನು ಹೇಳುತ್ತಾರೆ? ವಿಠಲ್ ಗೌಡರ ಹೇಳಿಕೆ ಬಗ್ಗೆ ಬಿಜೆಪಿಯವರ ಮೌನವೇಕೆ?
ರಾಜ್ಯ ಬಿಜೆಪಿ ನಾಯಕರು ಸೌಜನ್ಯ ಕುಟುಂಬದ ಪರವೋ? ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.