ಬೆಂಗಳೂರು: ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆಯಾಗಿದೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪಿಸಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭರತ್ ಶೆಟ್ಟಿ, ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವೇಶಿ ಫಂಡಿಂಗ್ ಬಳಕೆಯಾಗಿದೆ ಎಂಬ ಗುಮಾನಿ ಇದೆ. ಇಡಿ ಅಥವಾ ಎನ್ ಐಎ ತನಿಖೆಗೆ ಸಾಕಷ್ಟು ಒತ್ತಾಯಗಳು ಕೇಳಿಬರುತ್ತಿವೆ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಆಗಿದೆ ಎಂಬ ಬಗ್ಗೆ ಕೆಲ ನಂಬಲರ್ಹ ಮೂಲಗಳಿಂದ ಮಾಹಿತಿ ಬಂದಿದೆ ಎಂದು ತಿಳಿಸಿದರು. ಇಡಿ ಅಥವಾ ಎನ್ ಐಎ ತನಿಖೆಯಾದರೆ ಯಾರೆಲ್ಲ ಖಾತೆಗಳಿಗೆ ಎಲ್ಲಿಂದ ಹಣ ಎಷ್ಟು ಬಂದಿದೆ ಎಂಬುದು ಗೊತ್ತಾಗುತ್ತದೆ. ಈಗಾಗಲೇ ಷಡ್ಯಂತ್ರ ನಡೆದಿದೆ ಎಂಬ ಬಗ್ಗೆ ನಾವೂ ಹೇಳುತ್ತಿದ್ದೇವೆ. ಕಾಂಗ್ರೆಸ್ ನವರೂ ಹೇಳುತ್ತಿದ್ದಾರೆ. ಹಾಗಾಗಿ ಇಡಿ ಅಥವಾ ಎನ್ ಐಎ ತನಿಖೆಗೆ ಕೊಡಲಿ ಎಂದು ಹೇಳಿದರು.