ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ದೂರು ನೀಡಿರುವ ವ್ಯಕ್ತಿ ಕರೆತಂದು ನೇತ್ರಾವತಿ ನದಿ ತಟದಲ್ಲಿ ಸ್ಥಳ ಮಹಜರು ನಡೆಸಿದೆ.
ಎಸ್ ಐಟಿ ವಿಚಾರಣೆ ವೇಳೆ ದೂರುದಾರ ತಾನು ಕೆಲ ತಲೆಬುರುಡೆಗಳನ್ನು ನೇತ್ರಾವತಿ ನದಿಯ ಸ್ನಾನಘಟ್ಟದ ಬಳಿಯಿಂದ ಹೊರ ತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರು ನಡೆಸಿದ್ದಾರೆ.
ಎಸ್ ಐಟಿ ಎಸ್ ಪಿ ಸಿ.ಎ.ಸೈಮನ್ ನೇತೃತ್ವದಲ್ಲಿ ದೂರುದಾರನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳಮಹಜರು ನಡೆಸಲಾಗುತ್ತಿದೆ.
ಎಸ್ ಐಟಿ ತಂಡ ಕಳೆದ ಎರಡು ದಿನಗಳಿಂದ ದೂರುದಾರನ ವಿಚಾರಣೆ ನಡೆಸಿದ್ದು, ಸುಮಾರು 14 ಗಂಟೆಗಳ ಕಾಲ ವಿಚಹರಣೆ ನಡೆಸಿ, ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ.