HomeKarnatakaBREAKING: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವು

BREAKING: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವು

ಧಾರವಾಡ: ವಿದ್ಯಾಜ್ಯೋತಿ ವಸತಿ ಶಾಲೆಯ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದಿದೆ.

10 ವರ್ಷದ ಆಕಾಶ್ ನೀಲಣ್ಣವರ್ ಮೃತ ವಿದ್ಯಾರ್ಥಿ. ಹತ್ತು ದಿನಗಳ ಹಿಂದಷ್ಟೇ ಬಲಕ ಆಕಾಶ್ ವಸತಿ ಶಾಲೆಗೆ ಸೇರಿದ್ದ. ನಿನ್ನೆ ರಾತ್ರಿ ಪೋಷಕರಿಗೆ ಕರೆ ಮಾಡಿದ್ದ ಆಕಾಶ್, ಶಾಲೆಯಲ್ಲಿ ಶಿಕ್ಷಕರು ಬೈಯ್ಯುವುದು ಹೊಡೆಯುವುದು ಮಾಡುತ್ತಾರೆ ಎಂದು ಹೇಳಿ ಅಳಲು ತೋಡಿಕೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಬೆಳಿಗ್ಗೆ ಶಾಲೆಯಿಂದ ಪೋಷಕರಿಗೆ ಮಾಡಲಾಗಿದ್ದು, ಈ ವೇಳೆ ನಿಮ್ಮ ಮಗ ಶಾಲೆಯ ಕಾಂಪೌಂಡ್ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ತಕ್ಷಣ ಬರುವಂತೆ ತಿಳಿಸಿದ್ದರು. ಗಾಬರಿಯಾದ ಪೋಷಕರು ವಸತಿ ಶಾಲೆಗೆ ಬಂದು ನೋಡುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ.

ವಸತಿ ಶಾಲೆಯವರು ಹೇಳುವ ಪ್ರಕಾರ ಆಕಾಶ್ ಕಾಂಪೌಂಡ್ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಆತನನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ ಎಂದು. ಆದರೆ ಪೋಷಕರು ಇದನ್ನು ಒಪ್ಪುತ್ತಿಲ್ಲ. ಮಗನ ಸಾವಿನ ಬಗ್ಗೆ ತನಿಖೆಯಾಗಬೇಕು. ಕಾಂಪೌಂಡ್ ಮೇಲಿಂದ ಬಿದ್ದಿದರೆ ಸಾವನ್ನಪ್ಪುತ್ತಿರಲಿಲ್ಲ., ಕೈ-ಕಾಲು ಮುರಿಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಮಗ ಸಾವನ್ನಪ್ಪಿರುವುದು ಅನುಮಾನ ಮೂಡಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular