ಆಟವಾಡಿಸ್ತಿದ್ದ ಐಸ್‌ಕ್ರೀಂ ಮಾರಾಟಗಾರನಿಗೇ ಯಾಮಾರಿಸಿದ ಮಹಿಳೆ: ಕ್ಯೂಟ್‌ ವಿಡಿಯೋ ವೈರಲ್‌

ಮುಂಬೈ: ಮುಂಬೈನ ಟರ್ಕಿಸ್‌ ಐಸ್ ಕ್ರೀಮ್ ಮಾರಾಟಗಾರರು ವಿನೋದದ ರೀತಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡುವುದನ್ನು ನೋಡಬಹುದು. ಮಕ್ಕಳು ಮತ್ತು ವೃದ್ಧರು ಬಂದರೆ, ಮಾರಾಟಗಾರರು ಆಟದ ಮೂಲಕ ಐಸ್‌ಕ್ರೀಂ ನೀಡುವಂತೆ ಮಾಡಿ ಎಗರಿಸುವುದನ್ನು ನೋಡಬಹುದು.

ಆದರೆ ದೇಸಿ ಅಮ್ಮಂದಿರು ಏನು ಬೇಕಾದರೂ ಮಾಡಬಹುದು. ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ನಿರ್ಮಾಪಕಿ ಕೃಷಿಕಾ ಲುಲ್ಲಾ ಅವರ ತಾಯಿ ಮುಂಬೈನ ಮಾಲ್‌ನಲ್ಲಿ ಟರ್ಕಿಸ್‌ ಐಸ್ ಕ್ರೀಮ್ ಮಾರಾಟಗಾರರನ್ನು ಅತ್ಯಂತ ಉಲ್ಲಾಸದ ರೀತಿಯಲ್ಲಿ ಮೋಸಗೊಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಕೃಷಿಕಾ ಲುಲ್ಲಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಕೃಷಿಕಾ ಅವರ ತಾಯಿ ರಾಜು ಡೆಂಬ್ಲಾ ಅವರು ಟರ್ಕಿಯ ಐಸ್ ಕ್ರೀಮ್ ಸ್ಟಾಲ್‌ಗೆ ಹೋದಾಗ ಮಾರಾಟಗಾರನು ಮ್ಯಾಜಿಕ್ ಮಾಡುತ್ತಿದ್ದಾನೆ ಎಂದು ಭಾವಿಸಿ ಗೊಂದಲಕ್ಕೊಳಗಾಗುತ್ತಾರೆ. ನಂತರ ಅವರು ಅದನ್ನೇ ಆಟವಾಗಿ ಆಡಿ ಆಕೆ ಕೋನ್ ಹಿಡಿದು ಗೆಲ್ಲುತ್ತಾರೆ. ಈ ವಿಡಿಯೋ 6 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read