HomeIndiaBIG NEWS: 85 ವರ್ಷದ ವೃದ್ಧೆ ಮೇಲೆ 28 ವರ್ಷದ ಯುವಕನಿಂದ ಅತ್ಯಾಚಾರ; ಆರೋಪಿ ಅರೆಸ್ಟ್

BIG NEWS: 85 ವರ್ಷದ ವೃದ್ಧೆ ಮೇಲೆ 28 ವರ್ಷದ ಯುವಕನಿಂದ ಅತ್ಯಾಚಾರ; ಆರೋಪಿ ಅರೆಸ್ಟ್

ನವದೆಹಲಿ: 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ಕಾಮುಕ, ವೃದ್ಧೆಯ ತುಟಿ ಕೊಯ್ದು ಅಟ್ಟಹಾಸ ಮೆರೆದಿರುವ ಘೋರ ಘಟನೆ ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ನಡೆದಿದೆ.

ಒಂಟಿಯಾಗಿ ವಾಸವಾಗಿದ್ದ ಅಜ್ಜಿಯ ಮನೆಗೆ ಬೆಳಗಿನ ಜಾವ ನುಗ್ಗಿದ ಕಾಮುಕ ಯುವಕ, ಅಜ್ಜಿಯ ಮೇಲೆ ಹಲ್ಲೆ ನಡೆಸಿದ್ದು, ಬ್ಲೇಡ್ ನಿಂದ ಆಕೆಯ ತುಟಿಯನ್ನು ಕತ್ತರಿಸಿ ಕತ್ತು ಹಿಸುಕಲು ಯತ್ನಿಸಿದ್ದಾನೆ. ಬಳಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ವೃದ್ಧೆ ಸ್ಥಿತಿ ಗಂಭೀರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಸದಸ್ಯೆ ಸ್ವಾತಿ ಮಲಿವಾಲ್, ದೆಹಲಿ ಪೊಲೀಸರನ್ನು ಪ್ರಶ್ನಿಸಿ ಪೋಸ್ಟ್ ಹಾಕಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ಪ್ರಕರಣ ಸಂಬಂಧ 28 ವರ್ಷದ ಆಕಾಶ್ ಎಂಬಾತನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular