HomeCrimeಮತ್ತೊಂದು ಭೀಕರ ಘಟನೆ; ಡಿಕ್ಕಿಯಾಗಿ ಕಾರ್ ಮೇಲೆ ಹಾರಿಬಿದ್ದ ವ್ಯಕ್ತಿಯನ್ನು ಹಾಗೆಯೇ ಎಳೆದೊಯ್ದ ಚಾಲಕ |...

ಮತ್ತೊಂದು ಭೀಕರ ಘಟನೆ; ಡಿಕ್ಕಿಯಾಗಿ ಕಾರ್ ಮೇಲೆ ಹಾರಿಬಿದ್ದ ವ್ಯಕ್ತಿಯನ್ನು ಹಾಗೆಯೇ ಎಳೆದೊಯ್ದ ಚಾಲಕ | Watch

ಎಸ್ ಯು ವಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಹಿಂಬದಿ ಸವಾರ ಕಾರ್ ಮೇಲೆ ಹಾರಿಬಿದ್ದು ಸಾವನ್ನಪ್ಪಿರೋ ಘಟನೆ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ನಡೆದಿದೆ. ಶನಿವಾರ ತಡರಾತ್ರಿ ನಡೆದ ಘಟನೆಯಲ್ಲಿ ಮೃತ ವ್ಯಕ್ತಿಯ ಸ್ನೇಹಿತ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ.

ಮೃತರನ್ನು 30 ವರ್ಷದ ದೀಪಾಂಶು ವರ್ಮಾ ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಆತನ ಸ್ನೇಹಿತ ಮುಕುಲ್ ವರ್ಮಾ (20) ತಲೆಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಕ್ಕಿಯ ರಭಸಕ್ಕೆ ದೀಪಾಂಶು ಹಾರಿ ಕಾರಿನ ಮೇಲ್ಛಾವಣಿಯ ಮೇಲೆ ಬಿದ್ದಿದ್ದಾರೆ ಎಂದು ನವದೆಹಲಿ ಡಿಸಿಪಿ ಪ್ರಣವ್ ತಾಯಲ್ ಹೇಳಿದ್ದಾರೆ. ಚಾಲಕ ಅರ್ಧ ಕಿಲೋಮೀಟರ್ ವರೆಗೆ ಹಾಗೆಯೇ ಕಾರು ಚಾಲನೆ ಮಾಡಿದ್ದು ನಂತರ ಆತನನ್ನ ಕೆಳಗಿಳಿಸಿ ಎಸ್ಕೇಪ್ ಆಗಿದ್ದಾನೆ.

ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿರುವ ಕಾರು ಚಾಲಕ ಹರ್ನೀತ್ ಸಿಂಗ್ ಚಾವ್ಲಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಬರಾಖಂಬಾ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೀಪಾಂಶು ಗಾಜಿಯಾಬಾದ್‌ನಲ್ಲಿ ತನ್ನ ತಂದೆಯ ಆಭರಣ ವ್ಯಾಪಾರದಲ್ಲಿ ಕೆಲಸ ಮಾಡುತ್ತಿದ್ದರೆ, ಮುಕುಲ್ ಕಾನೂನು ವಿದ್ಯಾರ್ಥಿ.

ಈ ಘಟನೆಯು 2023 ರ ಜನವರಿ 1 ರ ಹೊಸ ವರ್ಷಾಚರಣೆ ವೇಳೆ ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 20 ವರ್ಷದ ಅಂಜಲಿ ಸಿಂಗ್ ಳನ್ನು ಎಳೆದುಕೊಂಡು ಹೋದ ಘಟನೆಯನ್ನು ನೆನಪಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular