HomeIndiaಶೀತ ವಾತಾವರಣ ಹಿನ್ನಲೆ ನರ್ಸರಿಯಿಂದ 5 ನೇ ತರಗತಿಯವರೆಗೆ 5 ದಿನ ರಜೆ ಘೋಷಣೆ ಮಾಡಿದ...

ಶೀತ ವಾತಾವರಣ ಹಿನ್ನಲೆ ನರ್ಸರಿಯಿಂದ 5 ನೇ ತರಗತಿಯವರೆಗೆ 5 ದಿನ ರಜೆ ಘೋಷಣೆ ಮಾಡಿದ ದೆಹಲಿ ಸರ್ಕಾರ

ನವದೆಹಲಿ: ಶೀತ ಹವಾಮಾನದ ಕಾರಣ ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ದೆಹಲಿಯಲ್ಲಿ 5ನೇ ತಗರತಿವರೆಗಿನ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ ಸಚಿವ ಅತಿಶಿ ಭಾನುವಾರ ಹೇಳಿದ್ದಾರೆ.

ದೆಹಲಿಯಲ್ಲಿ ವಿಪರೀತ ಚಳಿಯ ವಾತಾವರಣ ಇದ್ದು, ದಟ್ಟವಾದ ಮಂಜು, ಲಘು ಮಳೆ ಮತ್ತು ಮುಂದಿನ ಕೆಲವು ದಿನಗಳವರೆಗೆ ತಾಪಮಾನದಲ್ಲಿ ಕುಸಿತದ ಕಾರಣ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಚಾಲ್ತಿಯಲ್ಲಿರುವ ಶೀತ ಹವಾಮಾನದ ಕಾರಣದಿಂದ ದೆಹಲಿಯ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular