ನವದೆಹಲಿ: ಹೈದರಾಬಾದ್ ನ ಗುಲ್ಜಾರ್ ಹೌಸ್ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿ 17 ಜನರು ಸಾವನ್ನಪ್ಪಿರ್ಯ್ವ ಘಟನೆ ಬೆನ್ನಲ್ಲೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ದೆಹಲಿಯ ಪಶ್ಚಿಮ ವಿಹಾರ್ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಪಶ್ಚಿಮ ವಿಹಾರ್ ಮೆಟ್ರೋ ಸ್ಟೇಷನ್ ಬಳಿಯ ಹೊಟೆಲ್ ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಾ ತಿಳಿದುಬಂದಿಲ್ಲ.