BREAKING: 2 ಸಾವಿರ ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ: ವಾರದಲ್ಲಿ ದೆಹಲಿ ಪೊಲೀಸರ 2ನೇ ಭರ್ಜರಿ ಬೇಟೆ

ನವದೆಹಲಿ: ದೆಹಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪಶ್ಚಿಮ ದೆಹಲಿಯಿಂದ 2,000 ಕೋಟಿ ರೂಪಾಯಿ ಮೌಲ್ಯದ 200 ಕಿಲೋಗ್ರಾಂಗಳಷ್ಟು ಕೊಕೇನ್ ವಶಪಡಿಸಿಕೊಂಡಿದ್ದಾರೆ.

ಇದು ಒಂದು ವಾರದೊಳಗೆ ಎರಡನೇ ಪ್ರಮುಖ ಡ್ರಗ್ ಬೇಟೆಯಾಗಿದೆ. ಡ್ರಗ್ಸ್ ಅನ್ನು ಉಪ್ಪಿನ ಪ್ಯಾಕೆಟ್‌ಗಳಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ನಡೆಸಲಾದ ಕಾರ್ಯಾಚರಣೆ ನಡೆದಿದೆ. ನೈಋತ್ಯ ದೆಹಲಿಯ ಮಹಿಪಾಲ್‌ ಪುರದಿಂದ 5,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 562 ಕಿಲೋಗ್ರಾಂಗಳಷ್ಟು ಡ್ರಗ್ಸ್‌ನ ವಶಪಡಿಸಿಕೊಂಡು ಕೈಗೊಂಡ ತನಿಖೆ ಆಧರಿಸಿದ ಮುಂದುವರೆದ ಭಾಗ ಇದಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಇತ್ತೀಚಿನ ವಶಪಡಿಸಿಕೊಳ್ಳುವಿಕೆಯು ದೊಡ್ಡ ಮಾದಕವಸ್ತು ಕಳ್ಳಸಾಗಣೆ ಜಾಲದ ತನಿಖೆಯ ಭಾಗವಾಗಿದೆ ಎಂದು ದೃಢಪಡಿಸಿದರು. ಪಶ್ಚಿಮ ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿ ಪ್ರಸ್ತುತ ದಾಳಿಗಳು ನಡೆಯುತ್ತಿವೆ. ಪೊಲೀಸರು ರಾಜಧಾನಿಯಲ್ಲಿ ಅಕ್ರಮ ಮಾದಕವಸ್ತು ವಿರುದ್ಧ ತಮ್ಮ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ವಾರದ ಆರಂಭದಲ್ಲಿ ದೆಹಲಿ ಪೊಲೀಸರು ನಗರದಲ್ಲಿ ಇದುವರೆಗೆ ಕಂಡಿಲ್ಲದ ಬೃಹತ್ ಪ್ರಮಾಣದ ಮಾದಕ ದ್ರವ್ಯ ಜಪ್ತಿ ಮಾಡಿದ್ದರು. ಸುಮಾರು 560 ಕಿಲೋಗ್ರಾಂಗಳಷ್ಟು ಕೊಕೇನ್ ಮತ್ತು 40 ಕಿಲೋಗ್ರಾಂಗಳಷ್ಟು ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡರು. ಇದರ ಮೌಲ್ಯ ಅಂದಾಜು 5,620 ಕೋಟಿ ರೂ. ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read