HomeCrimeಬೆಚ್ಚಿಬೀಳಿಸುವಂತಿದೆ ಪೆಟ್ರೋಲ್‌ - ಡಿಸೇಲ್‌ ಕದಿಯಲು ಈತ ಮಾಡಿದ ಖತರ್ನಾಕ್‌ ಪ್ಲಾನ್‌ !

ಬೆಚ್ಚಿಬೀಳಿಸುವಂತಿದೆ ಪೆಟ್ರೋಲ್‌ – ಡಿಸೇಲ್‌ ಕದಿಯಲು ಈತ ಮಾಡಿದ ಖತರ್ನಾಕ್‌ ಪ್ಲಾನ್‌ !

ಗುಜರಾತ್ ನ ದ್ವಾರಕದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಪೈಪ್ ಲೈನ್ ಒಂದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ತೈಲವನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ದ್ವಾರಕಾದ ಪೋಚನ್‌ಪುರ್ ಗ್ರಾಮದಲ್ಲಿ ಪೈಪ್‌ಲೈನ್ ಒಂದರಿಂದ ಲಕ್ಷಗಟ್ಟಲೆ ಬೆಲೆಬಾಳುವ ತೈಲವನ್ನು ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಿದ್ದು, ಕೃತ್ಯವೆಸಗಿದ್ದ ಕಾವಲುಗಾರ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯು 40 ಮೀಟರ್ ಸುರಂಗವನ್ನು ಕೊರೆದು ಅದರ ಮೂಲಕ ಜೂನ್‌ನಿಂದ ತೈಲ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳುವಾದ ತೈಲದ ಪ್ರಮಾಣವನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳ್ಳತನ ನಡೆದ ಸ್ಥಳದಿಂದ ಅಪರಾಧ ಎಸಗಲು ಬಳಸಿದ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದ್ದಾರೆ. ಐಒಸಿಎಲ್ ಅಧಿಕಾರಿಯು ಈ ಪ್ರದೇಶದಲ್ಲಿ ತೈಲ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದರು, ಬಳಿಕ ತಾಂತ್ರಿಕ ಕಣ್ಗಾವಲು ಹೆಚ್ಚಿಸಲಾಗಿತ್ತು ಎಂದು ಹೇಳಿದರು. ಆರೋಪಿಯು ಐಒಸಿಎಲ್ ಪೈಪ್‌ಲೈನ್‌ನಿಂದ ನಿರಂತರವಾಗಿ ತೈಲ ಕದಿಯುತ್ತಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನೆಲದಿಂದ ಸುಮಾರು 2 ಮೀಟರ್ ನಷ್ಟು ಆಳ ಗುಂಡಿ ತೆಗೆದು ಆರೋಪಿಯು 40 ರಿಂದ 45 ಮೀ ಅಳತೆಯ ಸುರಂಗವನ್ನು ಕೊರೆದು ಅಂಡರ್ ಗ್ರೌಂಡ್ ನಲ್ಲಿದ್ದ ಪೈಪ್‌ಲೈನ್‌ ನಿಂದ ತೈಲ ಕಳ್ಳತನ ಮಾಡಿದ್ದ. ಸುರಂಗ ತೆರೆಯಲಾದ ಪ್ಲಾಟ್‌ನ ಮಾಲೀಕರು ತೈಲವನ್ನು ಕದಿಯುತ್ತಿದ್ದರು ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular