BREAKING: ದೆಹಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿನ ದಾಳಿಯಲ್ಲಿ ಇಬ್ಬರು ಸಾವು

ನವದೆಹಲಿ: ದೆಹಲಿ ಶಹದಾರದ ಫಾರ್ಷ್‌ ಬಜಾರ್‌ ಪ್ರದೇಶದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಆಕಾಶ್ ಮತ್ತು ರಿಷಬ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಕ್ರಿಶ್ ಎಂದು ಗುರುತಿಸಲಾಗಿದೆ.

ಶಹದಾರ ಉಪ ಪೊಲೀಸ್ ಕಮಿಷನರ್(ಡಿಸಿಪಿ), ಪ್ರಶಾಂತ್ ಗೌತಮ್, ರಾತ್ರಿ 8.30 ರ ಸುಮಾರಿಗೆ ಫಾರ್ಷ್ ಬಜಾರ್ ಪ್ರದೇಶದ ಬಿಹಾರಿ ಕಾಲೋನಿಯಲ್ಲಿ ಗುಂಡಿನ ದಾಳಿ ನಡೆದಿದೆ. ಕೆಲವು ಜನರು ಗಾಯಗೊಂಡಿದ್ದಾರೆ ಎಂದು ಪಿಸಿಆರ್ ಕರೆ ಬಂದಿದ್ದು, ಸ್ಥಳಕ್ಕೆ ತಲುಪಿದಾಗ ಆಕಾಶ್(40), ಅವರ ಸೋದರಳಿಯ ರಿಷಬ್(16) ಮತ್ತು ಅವರ ಮಗ ಕ್ರಿಶ್(10) ಗಾಯಗೊಂಡಿದ್ದರು ಎಂದು ತಿಳಿಸಿದ್ದಾರೆ.

ನಂತರದಲ್ಲಿ ಆಕಾಶ್ ಮತ್ತು ರಿಷಬ್ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಘಟನೆಯಲ್ಲಿ 5 ಸುತ್ತು ಗುಂಡು ಹಾರಿಸಿರುವುದು ಪತ್ತೆಯಾಗಿದೆ. ಗುಂಡಿನ ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read