HomeIndiaಬುದ್ಧಿ ಹೇಳಿದ್ದಕ್ಕೆ ಬೈಕ್ ಗೆ ಡಿಕ್ಕಿ ಹೊಡೆದು 10 ಮೀಟರ್ ಎಳೆದೊಯ್ದ ಕಿಡಿಗೇಡಿ; ಕರ್ತವ್ಯ ನಿರತ...

ಬುದ್ಧಿ ಹೇಳಿದ್ದಕ್ಕೆ ಬೈಕ್ ಗೆ ಡಿಕ್ಕಿ ಹೊಡೆದು 10 ಮೀಟರ್ ಎಳೆದೊಯ್ದ ಕಿಡಿಗೇಡಿ; ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ದುರ್ಮರಣ

ನವದೆಹಲಿ: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸಮೇತ ಪೊಲೀಸ್ ಅಧಿಕಾರಿಯನ್ನೇ ಎಳೆದೊಯ್ದು, ಅಧಿಕಾರಿಯ ಸಾವಿಗೆ ಕಿಡಿಗೇಡಿ ಕಾರಣನಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿ ಸಂದೀಪ್ ಮೃತರು. ಕಳ್ಳತನ ಪ್ರಕರಣ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಿದ್ದರು. ತಮ್ಮ ಬೈಕ್ ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ವ್ಯಾಗನಾರ್ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ತಡೆದು, ಸ್ವಲ್ಪ ನಿಧಾನವಾಗಿ ಕಾರು ಓಡಿಸಿ ಎಂದು ಪೊಲೀಸ್ ಅಧಿಕಾರಿ ಬುದ್ಧಿವಾದ ಹೇಳಿದ್ದಾರೆ.

ಇದಕ್ಕೆ ಸಿಟ್ಟಿಗೆದ್ದ ಕಾರು ಚಾಲಕ ಕಾರಿನ ವೇಗವನ್ನು ಇನ್ನಷ್ಟು ಹೆಚ್ಚಿಸಿ ಪೊಲೀಸ್ ಅಧಿಕಾರಿ ಬೈಕ್ ಗೆ ಗುದ್ದಿದ್ದಾನೆ. ಕೆಳಗೆ ಬಿದ್ದ ಪೊಲೀಸ್ ಅಧಿಕಾರಿ ಹಾಗೂ ಬೈಕ್ ಸಮೇತ 10 ಮೀಟರ್ ದೂರ ಎಳೆದೊಯ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪೊಲಿಸ್ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಬಳಿಕ ವ್ಯಕ್ತಿ ಕಾರು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗು ಹುಡುಕಾಟ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular