ತುಮಕೂರು: ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ i20 ಕಾರು ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ಕರ್ನಾಟಕದ ತುಮಕೂರಿನಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸಲಾಗಿದೆ.
ಈ ಹಿಂದೆ ವ್ಯಕ್ತಿ ಉಗ್ರ ಸಂಘಟನೆಯ ಜೊತೆ ಲಿಂಕ್ ಹೊಂದಿದ್ದ ಕಾರಣಕ್ಕೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ. ಎಎಸ್ ಪಿ ಪುರುಷೋತ್ತಮ್ ಅವರಿಂದ ತುಮಕೂರಿನ ಪಿ ಹೆಚ್ ಕಾಲೋನಿ ನಿವಾಸಿಯೊಬ್ಬರನ್ನು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಕಳುಹಿಸಲಾಗಿದೆ.
ವ್ಯಕ್ತಿಯ ಇತ್ತೀಚಿನ ನಡವಳಿ ಹಾಗೂ ದೆಹಲಿ ಸ್ಫೋಟದ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗಿದೆ. ಕೆಲ ಸಂಘಟನೆಯ ಮುಖಂಡರಿಗೆ ಸಭೆ ನಡೆಸಲು ತುಮಕೂರಿನಲ್ಲಿ ವ್ಯಕ್ತಿ ಅವಕಾಶ ಮಾಡಿಕೊಟ್ಟಿದ್ದ. ಈ ಹಿಂದೆ ಕಲಿಫತ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ಎನ್ ಐಎ ವ್ಯಕ್ತಿಯನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿತ್ತು. 6 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಬಂದಿದ್ದ. ಇದೀಗ ದೆಹಲಿ ಸ್ಫೋಟ ಘಟನೆ ಮರುದಿನವೇ ವ್ಯಕ್ತಿ ವಿಚಾರಣೆ ನಡೆಸಲಾಗಿದೆ.
