HomeIndiaBREAKING NEWS: 10 ಗಂಟೆ ಕಳೆದ್ರೂ ಟೇಕಾಫ್ ಆಗದ ದೆಹಲಿ –ಬೆಂಗಳೂರು ವಿಮಾನ: ಪ್ರಯಾಣಿಕರ ಆಕ್ರೋಶ

BREAKING NEWS: 10 ಗಂಟೆ ಕಳೆದ್ರೂ ಟೇಕಾಫ್ ಆಗದ ದೆಹಲಿ –ಬೆಂಗಳೂರು ವಿಮಾನ: ಪ್ರಯಾಣಿಕರ ಆಕ್ರೋಶ

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಸಿಬ್ಬಂದಿ ಎಡವಟ್ಟು ಬಯಲಾಗಿದೆ. 10 ಗಂಟೆಗಳ ಕಾಲ ಪ್ರಯಾಣಿಕರನ್ನು ವಿಮಾನದಲ್ಲಿಯೇ ಕೂಡಿಟ್ಟ ಆರೋಪ ಕೇಳಿ ಬಂದಿದೆ.

ಸ್ಪೈಸ್ ಜೆಟ್ ವಿಮಾನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಬೇಕಿತ್ತು. ತಾಂತ್ರಿಕ ದೋಷ ಎಂದು ದೆಹಲಿ ಏರ್ಪೋರ್ಟ್ ನಲ್ಲಿಯೇ ವಿಮಾನ ನಿಲ್ತಿಸಲಾಗಿದೆ. 10 ಗಂಟೆ ಕಳೆದರೂ ವಿಮಾನ ಟೇಕಾಫ್ ಆಗಿಲ್ಲ. 60 ಪ್ರಯಾಣಿಕರು ವಿಮಾನದಲ್ಲಿ ಕುಳಿತುಕೊಂಡಿದ್ದಾರೆ.

ಕನೆಕ್ಷನ್ ಫ್ಲೈಟ್ ಇದಾಗಿದ್ದು, ಕೆಲವರು 20 ಗಂಟೆಗಳಿಂದಲೂ ದೆಹಲಿ ವಿಮಾನ ನಿಲ್ದಾಣದಲ್ಲೇ ಉಳಿದುಕೊಂಡಿದ್ದಾರೆ. ನಿನ್ನೆ ರಾತ್ರಿ 7.40ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷವೆಂದು ಹೇಳಿ ನಿಲ್ದಾಣದಲ್ಲಿ 10 ಗಂಟೆಗೂ ಅಧಿಕಕಾಲ ಉಳಿಸಿಕೊಳ್ಳಲಾಗಿದೆ. ಸುಸ್ತಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೋರ್ಡಿಂಗ್ ಪಾಸ್ ಬದಲಾಯಿಸಿದ ಸಿಬ್ಬಂದಿ ಪ್ರಯಾಣಿಕರನ್ನು ಕೂರಿಸಿದ್ದು, ಮಾಹಿತಿ ನೀಡದೆ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಬ್ಬಂದಿ ಎಡವಟ್ಟಿನಿಂದ ಪ್ರಯಾಣಿಕರನ್ನು ವಿಮಾನದಲ್ಲಿ ಕೂಡಿಟ್ಟು ಕಾಟ ಕೊಟ್ಟಿದ್ದಾರೆ ಎಂದು ದೂರಿದ್ದು, ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular