ನವದೆಹಲಿ: ದೆಹಲಿ ವಿಧಾನಸಭೆ ಆವರಣದಲ್ಲಿ ಭದ್ರತಾ ವೈಫಲ್ಯವಾಗಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ವಿಧಾನಸಭೆ ಆವರಣಕ್ಕೆ ಕಾರು ನಿಗ್ಗಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ನೊಂದಣಿ ಉಳ್ಳ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ದೆಹಲಿ ವಿಧಾನಸಭೆ ಆವರಣದಲ್ಲಿರುವ ಗೇಟ್ ನಂಬರ್ 2ರ ಗೇಟಿಗೆ ಕಾರು ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರನ್ನು ವಿಧಾನಸಭೆ ಆವರಣಕ್ಕೆ ನುಗ್ಗಿಸಿದ್ದಾನೆ.
ನಂತರದಲ್ಲಿ ವಿಧಾನಸಭೆ ಸ್ಪೀಕರ್ ಕಾರಿನ ಮೇಲೆ ಇಂಕ್ ಚೆಲ್ಲಿ ವಿಚಿತ್ರ ವರ್ತನೆ ತೋರಿದ್ದು, ಬಳಿಕ ಅಲ್ಲಿಂದ ಕಾರು ಹತ್ತಿ ಪರಾರಿಯಾಗಿದ್ದಾನೆ. ವಿಧಾನಸಭೆ ಆವರಣದಲ್ಲಿ ಸಾಕಷ್ಟು ಭದ್ರತೆಗಳು ಇದ್ದಾಗ್ಯೂ ಅಪರಿಚಿತ ವ್ಯಕ್ತಿ ವಿಧಾನಸಭೆ ಆವರಣದೊಳಗೆ ಕಾರು ತಂದು ಈ ರೀತಿ ಕೃತ್ಯವೆಸಗಲು ಕಾರಣವೇನು? ಭದ್ರತಾ ವೈಫಲ್ಯ ಎಂಬ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

