ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ರೋಹಿತ್ ಕೀರ್ತಿ ನಿರ್ದೇಶನದ ‘# ಪಾರು ಪಾರ್ವತಿ’ ಚಿತ್ರ ಇದೇ ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಟ್ರಾವೆಲ್ ಅಡ್ವೆಂಚರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಆಶ್ರಫ್ ಮುಖ್ಯ ಭೂಮಿಕೆಯಲ್ಲಿದ್ದಾರೆ. EIGHTEEN THIRTY SIX ಪಿಕ್ಚರ್ಸ್ ಬ್ಯಾನರ್ ನಲ್ಲಿ ಪಿ ಬಿ ಪ್ರೇಮನಾಥ್ ನಿರ್ಮಾಣ ಮಾಡಿದ್ದು, ಸಿ ಕೆ ಕುಮಾರ್ ಸಂಕಲನ, ಚೇತನ್ ಡಿಸೋಜ ಸಾಹಸ ನಿರ್ದೇಶನ, ಅಬಿನ್ ರಾಜೇಶ್ ಛಾಯಾಗ್ರಹಣವಿದೆ. ಆರ್. ಹರಿ ಸಂಗೀತ ಸಂಯೋಜನೆ ನೀಡಿದ್ದಾರೆ.