HomeEntertainmentಸೈಫ್ ಅಲಿಖಾನ್ ಮಾಜಿ ಪತ್ನಿ ಬಗ್ಗೆ ಬಾಲಿವುಡ್ ನಟನ ಶಾಕಿಂಗ್ ಹೇಳಿಕೆ....!

ಸೈಫ್ ಅಲಿಖಾನ್ ಮಾಜಿ ಪತ್ನಿ ಬಗ್ಗೆ ಬಾಲಿವುಡ್ ನಟನ ಶಾಕಿಂಗ್ ಹೇಳಿಕೆ….!

90 ರ ದಶಕದ ಜನಪ್ರಿಯ ಬಾಲಿವುಡ್ ನಟ ದೀಪಕ್ ತಿಜೋರಿ ಅವರು ಸೈಫ್ ಅಲಿ ಖಾನ್ ಅವರ ಮಾಜಿ ಪತ್ನಿ, ನಟಿ ಅಮೃತಾ ಸಿಂಗ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ತಾರೆಯರು ತಮ್ಮ ಸ್ನೇಹಿತರ ಯೋಜನೆಗಳಿಗೆ ತಮ್ಮ ಬೆಂಬಲವನ್ನು ತೋರಿಸಲು ಮುಂದೆ ಬರದಿರುವ ಬಗ್ಗೆ ಮಾತನಾಡುತ್ತಾ, ತನ್ನ 1993 ರ ಚಿತ್ರ ಪೆಹ್ಲಾ ನಶಾಗೆ ನಟ ಸೈಫ್ ಅಲಿಖಾನ್ ಬಂದು ತನ್ನ ಬೆಂಬಲವನ್ನು ನೀಡಲು ಬಯಸಿದ್ದರು. ಆದರೆ ಅವರ ಹೆಂಡತಿ ಅಮೃತಾ ನನ್ನ ಚಿತ್ರಕ್ಕೆ ಬೆಂಬಲ ನೀಡದಂತೆ ತಡೆದರು ಎಂದು ಹೇಳಿದ್ದಾರೆ.

ಈ ಮೂಲಕ ಬಾಲಿವುಡ್ ನಲ್ಲಿ ನಮ್ಮಂತಹ ಕಲಾವಿದರಿಗೆ ಬೆಂಬಲ ಸಿಗದಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪೆಹ್ಲಾ ನಶಾ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೈಫ್ ಅಲಿಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular