ಹೋಟೆಲ್‌ನಲ್ಲೂ ಕುಣಿದು ಕುಪ್ಪಳಿಸಿದ ದೀಪಕ್ ಚಾಹರ್‌

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಐದನೇ ಬಾರಿಗೆ ಪ್ರಶಸ್ತಿ ಜಯಿಸಿದೆ.

ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಚೆನ್ನೈ ತಂಡ ಗೆಲ್ಲಲಿ ಎಂದು ದೇಶಾದ್ಯಂತ ಅವರ ಅಭಿಮಾನಿಗಳು ಆಸೆ ಇಟ್ಟುಕೊಂಡಿದ್ದರು. ಚೆನ್ನೈ ಗೆಲುವಿಗೆ ಕೇವಲ ಚೆನ್ನೈ ಮಾತ್ರವಲ್ಲ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇದೇ ವೇಳೆ, ಟ್ರೋಫಿ ಗೆದ್ದ ಚೆನ್ನೈ ತಂಡದ ಆಟಗಾರರು ಭಾರೀ ಸಂಭ್ರಮದಲ್ಲಿ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಹೋಟೆಲ್‌ನಲ್ಲೂ ಕುಣಿದಾಡಿದ್ದಾರೆ. ಸಿಎಸ್‌ಕೆ ತಂಡದ ಬೌಲರ್‌ ದೀಪಕ್ ಚಾಹರ್‌‌ ತಮ್ಮ ತಂಡ ವಾಸ್ತವ್ಯ ಹೂದಿದ್ದ ಹೋಟೆಲ್‌ನಲ್ಲಿ ಬೆಳಗ್ಗಿನ ಜಾವ 5 ಗಂಟೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ತಮ್ಮ ಸಹೋದರನ ಈ ಸಂಭ್ರಮಾಚರಣೆಯ ವಿಡಿಯೋ ಮಾಡಿಕೊಂಡಿರುವ ಚಾಹರ್‌ ಸಹೋದರಿ ಮಾಲ್ತಿ ಚಾಹರ್‌ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

https://twitter.com/ChaharMalti/status/1663349178301546496?ref_src=twsrc%5Etfw%7Ctwcamp%5Etweetembed%7Ctwterm%5E1663349178301546496%7Ctwgr%5E65b6325d1928474fb2894146a22aba7ece9a11f2%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fdeepakchaharshilariousdancevideocelebrationvideogoesviralaftercskwinipl2023watch-newsid-n504686876

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read