HomeLatest Newsಡಿಸಿಆರ್‌ಇ ಘಟಕದ ಪಿ.ಸಿ. ಹಾಗೂ ಹೆಚ್.ಸಿಗಳಿಗೆ ಸಿಹಿಸುದ್ದಿ: ವಾರದಲ್ಲಿ ಒಂದು ದಿನ ಕಡ್ಡಾಯ ರಜೆ

ಡಿಸಿಆರ್‌ಇ ಘಟಕದ ಪಿ.ಸಿ. ಹಾಗೂ ಹೆಚ್.ಸಿಗಳಿಗೆ ಸಿಹಿಸುದ್ದಿ: ವಾರದಲ್ಲಿ ಒಂದು ದಿನ ಕಡ್ಡಾಯ ರಜೆ

ಬೆಂಗಳೂರು: ಡಿಸಿಆರ್‌ಇ ಘಟಕದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ. ಹಾಗೂ ಹೆಚ್.ಸಿ. ಹುದ್ದೆಯ ಸಿಬ್ಬಂದಿಗಳಿಗೆ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆ ನೀಡುವಂತೆ ನಿರ್ದೇಶನ ಹೊರಡಿಸಲಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ.

ಪೊಲೀಸ್ ಪ್ರಧಾನ ಕಚೇರಿಯ ಸುತ್ತೋಲೆ ಸಂ.: ಆರ್‌ಎಲ್‌ಎನ್-1/14/2021, ದಿನಾಂಕ 03/08/2021 ಅನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದ್ದು, ಪಾಳಿ ಆಧಾರದ ಮೇಲೆ ಪ್ರತಿಯೊಬ್ಬ ಸಿಬ್ಬಂದಿಗೂ ವಾರದಲ್ಲಿ ಒಂದು ದಿನ ರಜೆ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಸಿ.ಆರ್.ಇ ಕಂಟ್ರೋಲ್ ರೂಮ್‌ನಿಂದ ಹೊರಬಂದ ಈ ಸಂದೇಶವು (NR: 37, GR: 100, ದಿನಾಂಕ: 16/07/2026) ಎಲ್ಲಾ ಠಾಣಾಧಿಕಾರಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯ ಈ ಹೊಸ ಆದೇಶದಿಂದ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಾರದ ಒಂದು ದಿನ ವಿಶ್ರಾಂತಿ ದೊರೆಯಲಿದ್ದು, ಇದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ. ಈ ಆದೇಶ ಜಾರಿಗೆ ಬಂದರೆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚುವ ನಿರೀಕ್ಷೆಯಿದೆ.

ಈ ಆದೇಶವನ್ನು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಉಮೇಶ್ ಕುಮಾರ್, ಐ.ಪಿ.ಎಸ್. ಅವರು 16 ಜುಲೈ 2026 ರಂದು ಸಹಿ ಮಾಡಿ ಪ್ರಕಟಿಸಿದ್ದಾರೆ. ಆದೇಶದ ಪ್ರತಿಗಳನ್ನು ಡಿ.ಐ.ಜಿ.ಪಿ., ಡಿಸಿಆರ್‌ಇ., ಬೆಂಗಳೂರು, ಡಿಸಿಆರ್‌ಇ ವಲಯದ ಎಲ್ಲಾ ಪೊಲೀಸ್ ಅಧೀಕ್ಷಕರು, ಆಡಳಿತಾಧಿಕಾರಿಗಳು, ಲೆಕ್ಕ ಶಾಖೆಯ ಶಾಖಾಧೀಕ್ಷಕರು ಹಾಗೂ ಸೂಚನಾ ಫಲಕ ಮತ್ತು ನಿಯಂತ್ರಣ ಕೊಠಡಿಗೆ ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular