HomeIPL 2026ಡೆಲ್ಲಿ 24ಕ್ಕೆ 4 ವಿಕೆಟ್ ಬಿದ್ದ ಕೂಡಲೇ ಬ್ಯಾಟ್ ಮಾಡಲು ಸಜ್ಜಾಗಿದ್ದ ಮಿಲ್ಲರ್‌ನ್ನು ಓಡೋಡಿ ಬಂದು...

ಡೆಲ್ಲಿ 24ಕ್ಕೆ 4 ವಿಕೆಟ್ ಬಿದ್ದ ಕೂಡಲೇ ಬ್ಯಾಟ್ ಮಾಡಲು ಸಜ್ಜಾಗಿದ್ದ ಮಿಲ್ಲರ್‌ನ್ನು ಓಡೋಡಿ ಬಂದು ತಡೆದ ಕೋಚ್; ನಂತರ ಆಗಿದ್ದೇ ಬೇರೆ

ನಿನ್ನೆ ( ಏಪ್ರಿಲ್ 1 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್‌ಗಳಲ್ಲಿ 141 ರನ್‌ಗೆ ಆಲ್‌ಔಟ್ ಆಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 142 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 17.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್‌ ದಾಖಲಿಸಿತು.

ಲಕ್ನೋ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 24 ರನ್‌ಗಳಿಗೆ ತನ್ನ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಎಲ್ ರಾಹುಲ್ ಪಂದ್ಯದ ಮೊದಲ ಎಸೆತದಲ್ಲೇ ಡಕ್‌ಔಟ್ ಆದರೆ, ನಿತಿಶ್ ರಾಣಾ 15 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಪಥುಮ್ ನಿಸ್ಸಂಕ ಕೇವಲ 1 ರನ್‌ಗೆ ಔಟ್ ಆದರು, ಬೆನ್ನಲ್ಲೇ ಅಕ್ಷರ್ ಪಟೇಲ್ ಡಕ್‌ಔಟ್ ಆದರು. ಈ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಸಾಧಾರಣ ಗುರಿ ಬೆನ್ನಟ್ಟಲು ಮುಂದಾಗಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಐದನೇ ವಿಕೆಟ್‌ಗೆ ಜತೆಯಾದ ಸಮೀರ್ ರಿಜ್ವಿ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ 119 ರನ್‌ಗಳ ಜತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರಂಭಿಕ ಆಘಾತ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಅಕ್ಸರ್ ಪಟೇಲ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಡೇವಿಡ್ ಮಿಲ್ಲರ್ ಪ್ಯಾಡ್ ಧರಿಸಿ ಬ್ಯಾಟ್ ಹಿಡಿದು ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ ಈ ಸಮಯದಲ್ಲಿ ಪೆವಿಲಿಯನ್‌ನಿಂದ ಆಟಗಾರರಿದ್ದ ಜಾಗಕ್ಕೆ ಓಡೋಡಿ ಬಂದ ಡೆಲ್ಲಿ ಹೆಡ್ ಕೋಚ್ ಹೇಮಾಂಗ್ ಬಡಾನಿ ಮಿಲ್ಲರ್‌ರನ್ನು ತಡೆದು ಟ್ರಿಸ್ಟನ್ ಸ್ಟಬ್ಸ್ ಕಣಕ್ಕಿಳಿಯಲಿ ಎಂಬ ಸಲಹೆ ನೀಡಿದರು.

ಅದರಂತೆ ಕಣಕ್ಕಿಳಿದ ಸ್ಟಬ್ಸ್ 32 ಎಸೆತಗಳಲ್ಲಿ ಅಜೇಯ 39 ರನ್ ಕಲೆಹಾಕಿ ಆಗಾಗಲೇ ಪಿಚ್ ಅರ್ಥ ಮಾಡಿಕೊಂಡಿದ್ದ ರಿಜ್ವಿಗೆ ಸಾಥ್ ಕೊಟ್ಟರು. ಪರಿಣಾಮ ರಿಜ್ವಿ 47 ಎಸೆತಗಳಲ್ಲಿ ಅಜೇಯ 70 ರನ್ ಬಾರಿಸಿದರು.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ಹೇಮಾಂಗ್ ಬಡಾನಿ ಮಾಡಿದ ನಿರ್ಧಾರದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ತಂಡ ಕುಸಿತ ಕಂಡಾಗ ಸಮಾಧಾನದಿಂದ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಸ್ಟಬ್ಸ್‌ರನ್ನು ಕಣಕ್ಕಿಳಿಸಿದ್ದು ಜಾಣ್ಮೆಯ ನಡೆ ಎಂದಿದ್ದಾರೆ.

https://twitter.com/Navyanth_17/status/2039577767482925337?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular