ರೋಹ್ಟಕ್: ಮಹಿಳಾ ಕಾರ್ಮಿಕರು ಪೀರೀಯಡ್ಸ್ ಆಗಿದ್ದು ನಿಜವೇ ಎಂದು ಚಕ್ ಮಾಡಲು ಬಟ್ಟೆ ಬಿಚ್ಚುವಂತೆ ವಿಶ್ವವಿದ್ಯಾಲಯದ ಮೇಲ್ವಿಚಾರಕ ಸೂಚಿಸಿದ ವಿಲಕ್ಷಣ ಘಟನೆ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಹರಿಯಾಣದ ರೋಹ್ಟಕ್ ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ನಾಲ್ವರು ಮಹಿಳಾ ನೈರ್ಮಲ್ಯ ಕಾರ್ಮಿಕರು ಮುಟ್ಟಾಗಿದ್ದರು. ಹಾಗಾಗಿ ಕೆಲಸಕ್ಕೆ ತಡವಾಗಿ ಆಗಮಿಸಿದ್ದರು. ಈ ವೇಳೆ ಮೇಲ್ವಿಚಾರಕ ನಿಜವಾಗಿಯೂ ನಿಮಗೆ ಪೀರಿಯಡ್ಸ್ ಆಗಿದೆಯಾ? ಅಥವಾ ಸುಳ್ಳು ಹೇಳುತ್ತಿದ್ದೀರಾ? ಬಟ್ಟೆ ಬಿಚ್ಚಿ ಎಂದು ಹೇಳಿದ್ದಾನೆ.
ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲ ಅಸಿಮ್ ಕುಮಾರ್ ಘೋಷ್ ಅಕ್ಟೋಬರ್ 26ರಂದು ಭೇಟಿ ನೀಡಿದ್ದರು. ಅಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ವಿನೋದ್ ಹಾಗೂ ವಿತೇಂದರ್ ಎಂಬ ಇಬ್ಬರು ಮೇಲ್ವಿಚಾರಕರು ನಾಲ್ವರು ಮಹಿಳಾ ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿದ್ದಾರೆ. ಯಾಕೆ ತಡವಾಗಿ ಬಂದಿದ್ದೀರಾ? ಎಂದು ಕೇಳಿದ್ದರು. ಅದಕ್ಕೆ ಮಹಿಳಾ ಸಿಬ್ಬಂದಿಗಳು ಹೊಟ್ಟೆ ನೋವು. ಹುಷಾರಿಲ್ಲ ಎಂದಿದ್ದಾರೆ. ಆದರೂ ಸುಮ್ಮನಾಗದ ಇಬ್ಬರೂ ಮೇಲ್ವಿಚಾರಕರು ಬೈದಿದ್ದಾರೆ. ಹೋಟೆನೋವು, ಪೀರಿಯಡ್ಸ್ ಆಗಿದೆ. ಹಾಗಾಗಿ ತಡವಾಗಿದೆ ಎಂದಿದ್ದಾರೆ. ಅವರಲ್ಲೊಬ್ಬ ಮೇಲ್ವಿಚಾರಕ ಸುಳ್ಳು ಹೇಳುತ್ತಿದ್ದೀರಾ? ಬಟ್ಟೆ ಬಿಚ್ಚಿ ಎಂದು ಗದರಿದ್ದಾನೆ. ಅಲ್ಲದೇ ಮಹಿಳಾ ಸಿಬ್ಬಂದಿಗಳನ್ನು ಕರೆದು ಅವರು ಸ್ಯಾನಿಟರಿ ಪ್ಯಾಡ್ ಧರಿಸಿದ್ದಾರೆಯೇ ಎಂದು ಪರಿಶೀಲಿಸಲು ಸೂಚಿಸಿದ್ದಾನೆ.
ಮಹಿಳಾ ಕಾರ್ಮಿಕರು ಮೇಲ್ವಿಚಾರಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಮಿಕರು, ಮಹಿಳಾ ಸಿಇಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ. ಇಬ್ಬರು ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ವಿಶ್ವವಿದ್ಯಾಲಯ ಇಬ್ಬರು ಪುರುಷ ಮೇಲ್ವಿಚಾರಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 
			 
		 
		 
		 
		 Loading ...
 Loading ... 
		 
		 
		