HomeLatest Newsಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಗೆ ಬಿಗ್ ಶಾಕ್: ಕಣದಿಂದ ನಿವೃತ್ತಿ ಘೋಷಿಸಿ ಪಕ್ಷವನ್ನೇ...

ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಗೆ ಬಿಗ್ ಶಾಕ್: ಕಣದಿಂದ ನಿವೃತ್ತಿ ಘೋಷಿಸಿ ಪಕ್ಷವನ್ನೇ ತೊರೆದ ಅಭ್ಯರ್ಥಿ

ಗುವಾಹಟಿ: ಅಸ್ಸಾಂನಲ್ಲಿ ಮತದಾನಕ್ಕೆ ಒಂದು ದಿನ ಮೊದಲು ಉದಲ್ಗುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ಡೈಮರಿ ಬುಧವಾರ ಪಕ್ಷ ತೊರೆದು ಸ್ಪರ್ಧಾ ಕಣದಿಂದ ನಿವೃತ್ತರಾಗಿದ್ದಾರೆ.

ತಮ್ಮ ಉಮೇದುವಾರಿಕೆಯನ್ನು ತಟಸ್ಥ ಎಂದು ಘೋಷಿಸಿದರು. ಆದಾಗ್ಯೂ, ಅವರು ಇನ್ನೂ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.

ಆದರೆ, ಸುರೇನ್ ಡೈಮರಿ ತಟಸ್ಥರಾಗಿದ್ದರೂ ಅವರ ಹೆಸರು ಇವಿಎಂನಲ್ಲಿ ಉಳಿಯುತ್ತದೆ ಮತ್ತು ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಬಹಳ ಹಿಂದೆಯೇ ಮುಗಿದಿರುವುದರಿಂದ ಜನರು ಇನ್ನೂ ಅವರಿಗೆ ಮತ ಚಲಾಯಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ನಿರ್ಧಾರವನ್ನು ಘೋಷಿಸಿದ ಡೈಮರಿ, ಕಾಂಗ್ರೆಸ್‌ನಲ್ಲಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ನನಗೆ ದ್ರೋಹ ಮಾಡಿದೆ. ಉದಲ್ಗುರಿ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದರೂ ನನಗೆ, ಕಾಂಗ್ರೆಸ್ ಪ್ರಚಾರದಲ್ಲಿ ಯಾವುದೇ ಬೆಂಬಲವನ್ನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಪಕ್ಷದ ನಾಯಕತ್ವವನ್ನು ಪದೇ ಪದೇ ಕರೆ ಮಾಡಿದೆ, ಆದರೆ ಅವರು ನನ್ನ ಕರೆಯನ್ನು ಸಹ ಸ್ವೀಕರಿಸಲಿಲ್ಲ. ಅವರು ನನಗೆ ಯಾವುದೇ ಸಹಾಯ ಮಾಡದ ಕಾರಣ ನನಗೆ ನೋವಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಕೂಡ ನನಗೆ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.

 ಪ್ರತಿಕ್ರಿಯೆಗಾಗಿ ದೀರ್ಘಕಾಲ ಕಾದೆ. ಈಗ ಪಕ್ಷವನ್ನು ತೊರೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು. ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ, ಪಕ್ಷವು ನನಗೆ ದ್ರೋಹ ಮಾಡಿದೆ ಎಂದು ದೂರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular