World Cup: ಡೇವಿಡ್ ವಾರ್ನರ್ ಯಶಸ್ಸಿನ ಗುಟ್ಟು ಬಹಿರಂಗ…!

ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಮೂಲಕ ಯಶಸ್ಸಿನ ಹಾದಿಯಲ್ಲಿದ್ದಾರೆ. ಎಂಟು ಪಂದ್ಯಗಳಿಂದ ಒಟ್ಟು 446 ರನ್ ಪೇರಿಸಿರುವ ಅವರು ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಧಿಕ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ನಾಲ್ಕನೇ ಸ್ಥಾನದಲ್ಲಿದ್ದು, ಇದೀಗ ಅವರ ಅಬ್ಬರದ ಆಟದ ಹಿಂದಿನ ಗುಟ್ಟು ಬಹಿರಂಗವಾಗಿದೆ.

ಡೇವಿಡ್ ವಾರ್ನರ್ ಈ ಮೊದಲಿನಿಂದಲೂ ‘ಮೇಡ್ ಇನ್ ಇಂಡಿಯಾ’ ಬ್ಯಾಟ್ ಗಳನ್ನು ಬಳಸುತ್ತಿದ್ದು, ಹಲವು ಬ್ಯಾಟುಗಳನ್ನು ಹೊಂದಿರುವ ಅವರು ಪಿಚ್ ಗೆ ಅನುಗುಣವಾಗಿ ಇವುಗಳನ್ನು ಬಳಸುತ್ತಾರಂತೆ. ಭಾರತದ ಮೈದಾನಗಳಲ್ಲಿ ಚೆಂಡು ಹೆಚ್ಚು ಪುಟಿಯದ ಕಾರಣ ಅದಕ್ಕೆ ಅನುಗುಣವಾಗಿ ತಮ್ಮ ‘ಮೇಡ್ ಇನ್ ಇಂಡಿಯಾ’ ಬ್ಯಾಟನ್ನು ಅವರು ವಿನ್ಯಾಸಗೊಳಿಸಿಕೊಂಡಿದ್ದಾರಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read