HomeKarnatakaದಾವಣಗೆರೆಯಲ್ಲಿ 2 ಗುಂಪುಗಳ ನಡುವೆ ತಲ್ವಾರ್, ದೊಣ್ಣೆಗಳಿಂದ ಹೊಡೆದಾಟ: ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ದಾವಣಗೆರೆಯಲ್ಲಿ 2 ಗುಂಪುಗಳ ನಡುವೆ ತಲ್ವಾರ್, ದೊಣ್ಣೆಗಳಿಂದ ಹೊಡೆದಾಟ: ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ದಾವಣಗೆರೆ: ದಾವಣಗೆರೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಲ್ವಾರ್ ಮತ್ತು ದೊಣ್ಣೆಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ.

ದಾವಣಗೆರೆ ನಗರದ ಬಿ.ಡಿ. ಲೇಔಟ್ ನಲ್ಲಿ ಘಟನೆ ನಡೆದಿದೆ. ಮೈನು, ಜುನೈದ್, ಇರ್ಫಾನ್ ಸೇರಿ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮೊಹಮ್ಮದ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಯುವಕರ ಗುಂಪಿನಿಂದ ದಾಳಿ ನಡೆದಿದೆ. ಹಳೆಯ ವೈಷಮ್ಯ, ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದಿದೆ ಎನ್ನಲಾಗಿದೆ.

ಗಾಯಾಳುಗಳಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಲ್ಲೂಕು ಮಟ್ಟದ ದಸರಾಕ್ರೀಡಾಕೂಟ

ದಾವಣಗೆರೆ: ತಾಲ್ಲೂಕು ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ದಾವಣಗೆರೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.9 ರಂದು ಜಿಲ್ಲಾ ಕ್ರೀಡಾಂಗಣ, ಇಲ್ಲಿ  ಆಯೋಜಿಸಲಾಗಿದೆ.

ಅಥ್ಲೆಟಿಕ್ಸ್ ಸ್ಪರ್ಧೆಗಳು (ಪುರುಷರಿಗೆ):  100 ಮೀ, 200 ಮೀ,  400ಮೀ, 800 ಮೀ,  1500 ಓಟ, 5000 ಮೀ.ಓಟ,  10,000 ಮೀ,ಓಟ, ಉದ್ದ ಜಿಗಿತ, ಎತ್ತರ ಜಿಗಿತ,  ಗುಂಡು ಎಸೆತ,  ಟ್ರಿಪಲ್ ಜಂಪ್, ಜಾವಲಿನ್ ಥೋ,  ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ

ಅಥ್ಲೆಟಿಕ್ಸ್ ಸ್ಪರ್ಧೆಗಳು (ಮಹಿಳೆಯರಿಗೆ): 100 ಮೀ, 200 ಮೀ,  400ಮೀ, 800 ಮೀ,  1500 ಓಟ, 3000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ,  ಗುಂಡು ಎಸೆತ,  ಟ್ರಿಪಲ್ ಜಂಪ್, ಜಾವಲಿನ್ ಥ್ರೋ,  ಡಿಸ್ಕಸ್ ಥ್ರೋ, 100 ಮೀ.ಹರ್ಡಲ್, 4*100 ಮೀ ರಿಲೇ, 14*100 ಮೀ.ರಿಲೇ

ವಾಲಿಬಾಲ್ ಪುರುಷ ಮತ್ತು ಮಹಿಳೆಯರಿಗೆ, ಪುಟ್ಬಾಲ್ |ಪುರುಷರಿಗೆ, ಖೋ-ಖೋ ಪುರುಷ ಮತ್ತು ಮಹಿಳೆಯರಿಗೆ, ಕಬಡ್ಡಿ ಪುರುಷ ಮತ್ತು ಮಹಿಳೆಯರಿಗೆ, ಥ್ರೋಬಾಲ್ ಪುರುಷ ಮತ್ತು ಮಹಿಳೆಯರಿಗೆ, ಯೋUಸಾನ ವೀರಭದ್ರಾಸನ, ಜಾನು ಶಿರ್ಶಾಸನ,  ಹಲಾಸನ, ಧನುರಾಸನ

ಸೆ.9 ರಂದು ಬೆಳಿಗ್ಗೆ 9 ಒಳಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಲ್ಲಿ ಆಯಾ ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ https://dasaramcup.in/ ರ ಮುಖಾಂತರ ಆನ್ ಲೈನ್ ನೋಂದಣಿ ಮಾಡಿಕೊಳ್ಳತಕ್ಕದು ಕ್ರೀಡಾಪಟುಗಳು ಪ್ರತಿನಿಧಿಸುವ ತಾಲ್ಲೂಕಿನ ಸ್ಥಳೀಯವಾದ ದೃಢೀಕರಣದ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ತುಕರಾಮ್ ಎಂ ಗೌಡ, ಕುಸ್ತಿ ತರಬೇತುದಾರರು ಮೊ.ಸಂ: 9945489193 ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಆಧುನಿಕ ಹೈನುಗಾರಿಕೆ ತರಬೇತಿ

ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಹೈನುಗಾರಿಕೆ ತರಬೇತಿ ಸೆಪ್ಟೆಂಬರ್ 8 ಮತ್ತು 9 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು  ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular