HomeLatest NewsBREAKING: ದಾವಣಗೆರೆ ಡ್ರಗ್ಸ್ ಪ್ರಕರಣ: ಮತ್ತೋರ್ವ ಉದ್ಯಮಿ ಅರೆಸ್ಟ್

BREAKING: ದಾವಣಗೆರೆ ಡ್ರಗ್ಸ್ ಪ್ರಕರಣ: ಮತ್ತೋರ್ವ ಉದ್ಯಮಿ ಅರೆಸ್ಟ್

ದಾವಣಗೆರೆ: ದಾವಣಗೆರೆಯಲ್ಲಿ ಮಾದಕ ವಸ್ತು, ಸಿಂಥೆಟಿಕ್ಸ್ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆಸಿರುವ ಪೊಲೀಸರು ಮತ್ತೋರ್ವ ಉದ್ಯಮಿಯನ್ನು ಬಂಧಿಸಿದ್ದಾರೆ.

ಶಿವರಾಜ್ ಬಂಧಿತ ಉದ್ಯಮಿ. ದಾವಣಗೆರೆಅ ವಿದ್ಯಾನಗರ ಠಾಣೆ ಪೊಲೀಸರು ಉದ್ಯಮಿ ಶಿವರಾಜ್ ನನ್ನು ಬಂಧಿಸಿದ್ದಾರೆ. ಉದ್ಯಮಿ ಶಿವರಾಜ್ ದಾವಣಗೆರೆಯ ಎಸ್.ಎಸ್.ಲೇಔಟ್ ನಿವಾಸಿ. ಈ ಹಿಂದೆ ಆರ್ ಟಿ ಒ ಕಚೇರಿಯಲ್ಲಿ ಏಜೆಂಟ್ ಆಗಿದ್ದರು. ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದರು.

ಈಗಾಗಲೇ ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ವೀರಶೈವ ಮಹಾಸಭಾ ಸದಸ್ಯ ಶಾಮನೂರು ವೇದಮೂರ್ತಿ ಎಂಬಾತನ್ನನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ದಾವಣಗೆರೆ ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ಮುಖಂಡರು, ಉದ್ಯಮಿಗಳೇ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular