ದಾವಣಗೆರೆ: 16 ವರ್ಷದ ಅಪ್ರಾಪ್ತ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಮಾರ್ಕೆಟ್ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಚಿಕ್ಕನಹಳ್ಳಿತ ತರುಣ್ (16) ಆತ್ಮಹತ್ಯೆಗೆ ಶರಣಾದ ಯುವಕ. ಓದಲೂ ಹೋಗದೇ, ಕೆಲಸವನ್ನೂ ಮಾಡದೇ ಕೆಲ ಹುಡುಗರ ಸಹವಾಸ ಮಾಡಿ ತಪ್ಪು ದಾರಿ ಹಿಡಿಯುತ್ತಿದ್ದ. ಮಗನ ಹುಚ್ಚಾಟದಿಂದ ನೊಂದ ಪೋಷಕರು ಹುಡುಗರ ಜೊತೆ ಸೇರಿ ಓಡಾಡುತ್ತ ಕಾಲಹರಣ ಮಾಡುವುದು, ತಪ್ಪು ದಾರಿ ಹಿಡಿಯಬೇಡ. ಕೆಲಸಕ್ಕಾದರೂ ಹೋಗಿ ಸಂಪಾದನೆ ಮಾಡು ಎಂದು ಬೈದು ಬುದ್ಧಿ ಹೇಳಿದ್ದಾರೆ.
ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ತರುಣ್ ಮನೆಬಿಟ್ಟು ಹೋಗಿದ್ದಾನೆ. ಮಗನಿಗಾಗಿ ಪೋಷಕರು ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ. ರೈಲ್ವೆ ಬ್ರಿಡ್ಜ್ ಬಳಿ ಯುವಕ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
