HomeKarnatakaಪತ್ನಿ ಹತ್ಯೆಗೈದು ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ಪತಿ

ಪತ್ನಿ ಹತ್ಯೆಗೈದು ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದ ಪತಿ

ದಾವಣಗೆರೆ: ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ವ್ಯಕ್ತಿ ಬಳಿಕ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕೆರೆಗೆ ಎಸೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಕೊಡಗನೂರು ಗ್ರಾಮದಲ್ಲಿ ನಡೆದಿದೆ.

ಕಾವ್ಯಾ (21) ಕೊಲೆಯಾದ ಮಹಿಳೆ. ಸಚಿನ್ (24) ಪತ್ನಿಯನ್ನೇ ಕೊಂದ ಪತಿ. ಸಾಸಲುಹಳ್ಳ ಗ್ರಾಮದ ಕಾವ್ಯಾಳನ್ನು 5 ವರ್ಷಗಳ ಹಿಂದೆ ಸಚಿನ್ ವಿವಾಹವಾಗಿದ್ದ. ಮದುವೆಯಾಗಿದ್ದರೂ ಚೈತ್ರ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಈ ವಿಷಯ ಕಾವ್ಯಾಳಿಗೆ ಗೊತ್ತಾಗುತ್ತಿದ್ದಂತೆ ಪತಿಯನ್ನು ಪ್ರಶ್ನಿಸಿದ್ದಾಳೆ. ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿಯಾಗುತ್ತಾಳೆ ಎಂದು ಪತಿ ಸಚಿನ್ ಹಾಗೂ ಚೈತ್ರಾ ಸೇರಿ ಪ್ಲಾನ್ ಮಾಡಿ ಕಾವ್ಯಾಳನ್ನು ಕೊಲೆಗೈದು ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಕೊಡಗನೂರು ಕೆರೆಗೆ ಬಿಸಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನುಮಾನಗೊಂಡ ಪೊಲೀಸರು, ಕೆರೆಯಲ್ಲಿ ಕಂಡುಬಂದ ಗೋಣಿ ಚೀಲದ ಮೂಟೆಯನ್ನು ತೆಗೆದು ಪರಿಶೀಲಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular