HomeKarnatakaBIG NEWS: 2000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ ಟೇಬಲ್

BIG NEWS: 2000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ ಟೇಬಲ್

ದಾವಣಗೆರೆ: 2000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಬಡಾವಣೆ ಠಾಣೆ ಪಿಸಿ ಹನುಮಂತಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ವಾರೆಂಟ್ ಜಾರಿ ಮಾಡಲು ಪಿಸಿ ಹನುಮಂತಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹನುಮಂತಪ್ಪ, ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಸರಸ್ವತಿ ನಗರದ ನಿವಾಸಿ ಲಕ್ಕಪ್ಪ ಅಂಗಡಿ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಸೈಯದ್ ತಹಿರುದ್ದೀನ್ ಎಂಬಾತನ ವಿರುದ್ಧ ಲಕ್ಕಪ್ಪ ಅಂಗಡಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ತಹಿರುದ್ದೀನ್ ಗೆ ವಾರೆಂಟ್ ಜಾರಿ ಮಾಡುವಂತೆ ಲಕ್ಕಪ್ಪ, ಪಿಸಿ ಹನುಮಂತಪ್ಪಗೆ ಮನವಿ ಮಾಡಿದ್ದರು. ವಾರಂಟ್ ಜಾರಿ ಮಾಡಲು 2000 ಲಕ್ಷಕ್ಕೆ ಪಿಸಿ ಬೇಡಿಕೆ ಇಟ್ಟಿದ್ದು, ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular