HomeKarnatakaಆಸ್ತಿ ವಿಚಾರವಾಗಿ ಆಸ್ಪತ್ರೆಯಲ್ಲೇ ಅಣ್ಣನ ಕೊಲೆಗೈದ ತಮ್ಮ

ಆಸ್ತಿ ವಿಚಾರವಾಗಿ ಆಸ್ಪತ್ರೆಯಲ್ಲೇ ಅಣ್ಣನ ಕೊಲೆಗೈದ ತಮ್ಮ

ದಾವಣಗೆರೆ: ಆಸ್ತಿ ವಿಚಾರಕ್ಕೆ ಜಗಳವಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಚಾಕುವಿನಿಂದ ಇರಿದು 34 ವರ್ಷದ ಕುಮಾರ್ ನನ್ನು ಹತ್ಯೆ ಮಾಡಲಾಗಿದೆ. ಅಣ್ಣ ಕುಮಾರ್ ನನ್ನು ಕೊಲೆ ಮಾಡಿ ತಮ್ಮ ನಾಗರಾಜ್ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು ಜಗಳೂರಿನಲ್ಲಿ ಬೈಕ್ ನಲ್ಲಿ ತೆರಳುವಾಗ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆಗೂ ತೆರಳಿ ಚಾಕುವಿನಿಂದ ಇರಿದುಕೊಂಡು ನಾಗರಾಜ ಪರಾರಿಯಾಗಿದ್ದಾನೆ. ತಂದೆ ನಿಧನದ ಬಳಿಕ ಹರಿಹರದಲ್ಲಿದ್ದ ಮನೆಯಲ್ಲಿ ಪಾಲು ಕೇಳಿದ್ದ. ಇದೇ ವಿಚಾರಕ್ಕೆ ಅಣ್ಣನನ್ನು ತಮ್ಮ ನಾಗರಾಜ ಕೊಲೆ ಮಾಡಿದ್ದಾನೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular