HomeKarnatakaಬೆಂಗಳೂರಲ್ಲಿ ಅಮಾನುಷ ಘಟನೆ: ಮಾತು ಬರುತ್ತಿಲ್ಲ ಎಂದು ಮಗುವನ್ನೇ ಕೊಂದ ತಾಯಿ

ಬೆಂಗಳೂರಲ್ಲಿ ಅಮಾನುಷ ಘಟನೆ: ಮಾತು ಬರುತ್ತಿಲ್ಲ ಎಂದು ಮಗುವನ್ನೇ ಕೊಂದ ತಾಯಿ

ಬೆಂಗಳೂರು: ಮಾತು ಬರುತ್ತಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮೂರು ವರ್ಷ 10 ತಿಂಗಳ ಬುದ್ಧಿಮಾಂದ್ಯ ಹೆಣ್ಣು ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೀತಿಕಾ ಕೊಲೆಯಾದ ಮಗು. ಚಿಕ್ಕಲ್ಲಸಂದ್ರ ಮಂಜುನಾಥ ನಗರದ ಸಿರಿ ಅಪಾರ್ಟ್ಮೆಂಟ್ ನಿವಾಸಿ ರಮ್ಯಾ(35) ಕೊಲೆ ಮಾಡಿದ ಆರೋಪಿ. ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಆರೋಪಿ ರಮ್ಯಾ ಮತ್ತು ವೆಂಕಟೇಶ್ ಕೃಷ್ಣನ್ 10 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂರು ವರ್ಷ 10 ತಿಂಗಳ ಅವಳಿ ಮಕ್ಕಳಿದ್ದಾರೆ. ಪ್ರೀತಿಕಾ ಬುದ್ಧಿಮಾಂದ್ಯೆಯಾಗಿದ್ದು, ಮಾತು ಬರುತ್ತಿರಲಿಲ್ಲ. ಇದರಿಂದ ಬೇಸರಗೊಂಡ ರಮ್ಯಾ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ನಂತರ ವಾಜರಹಳ್ಳಿಯಲ್ಲಿರುವ ಮೈದುನನಿಗೆ ಕರೆ ಮಾಡಿದ ರಮ್ಯಾ ವಿಚಾರ ತಿಳಿಸಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೆಂಕಟೇಶ್ ನಾರ್ವೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲವು ವರ್ಷ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ರಮ್ಯಾ ನಂತರ ಕೆಲಸ ಬಿಟ್ಟು ಅವಳಿ ಮಕ್ಕಳನ್ನು ನೋಡಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular