HomeKarnatakaBIG NEWS: ರಾಜ್ಯದ ಶಾಲೆಗಳಿಗೆ ಅ. 31ರವರೆಗೆ ದಸರಾ ರಜೆ ವಿಸ್ತರಣೆಗೆ ಶಿಕ್ಷಕರ ಆಗ್ರಹ: ಸಭಾಪತಿಗಳಿಂದಲೂ...

BIG NEWS: ರಾಜ್ಯದ ಶಾಲೆಗಳಿಗೆ ಅ. 31ರವರೆಗೆ ದಸರಾ ರಜೆ ವಿಸ್ತರಣೆಗೆ ಶಿಕ್ಷಕರ ಆಗ್ರಹ: ಸಭಾಪತಿಗಳಿಂದಲೂ ಶಿಕ್ಷಣ ಸಚಿವರಿಗೆ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳಿಗೆ ನೀಡಿರುವ ದಸರಾ ರಜೆಯನ್ನು ಅ. 31ರವರೆಗೆ ವಿಸ್ತರಿಸಬೇಕು. 15 ದಿನಗಳ ರಜೆ ಸಾಲದು, ಮೊದಲಿನಂತೆ 29 ದಿನ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ಶಿಕ್ಷಣ ಇಲಾಖೆ ಆಯುಕ್ತರಿಗೆ ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಈ ಕುರಿತಾಗಿ ಪತ್ರ ಬರೆದಿದ್ದಾರೆ. ಮೊದಲಿನಿಂದಲೂ ಶಾಲೆಗಳಿಗೆ ಅ.3ರಿಂದ 31ರವರೆಗೆ ನೀಡುವ ಮೂಲಕ ನಾಡಿನ ಪರಂಪರೆ, ಆಚರಣೆಗಳನ್ನು ನೋಡಲು, ತಿಳಿಯಲು ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ದಸರಾ ರಜೆಯ ಅವಧಿಯನ್ನು ಅರ್ಧದಷ್ಟು ಕಡಿತ ಮಾಡಲಾಗಿದೆ. ಇದರಿಂದ ಮಕ್ಕಳು ಶಿಕ್ಷಕರಿಗೆ ಇದ್ದ 230 ಶಾಲಾ ದಿನಗಳು 260 ದಿನಗಳಿಗೆ ಏರಿಕೆಯಾಗಿದ್ದು, ಅವೈಜ್ಞಾನಿಕ ಕ್ರಮವನ್ನು ಪುನರ್ ಪರಿಶೀಲಿಸಿ ಮೊದಲಿನಂತೆ ಅ. 31 ರವರೆಗೆ ದಸರಾ ರಜೆ ವಿಸ್ತರಿಸಬೇಕೆಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಭಾಪತಿಗಳಿಂದಲೂ ಸಲಹೆ:

ಮಕ್ಕಳ ಹಿತ ದೃಷ್ಟಿಯಿಂದ ನವೆಂಬರ್ 1ರವರೆಗೂ ದಸರಾ ರಜೆ ವಿಸ್ತರಣೆ ಮಾಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ ಸಲಹೆ ನೀಡಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅ. 2ರಿಂದ 30ರವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿಯ ದಸರಾ ರಜೆ ಇರುತ್ತಿತ್ತು. ಹಿಂದಿನ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular