HomeKarnatakaದರ್ಶನ್ ಬಂಧನವಾಗಿ ಇಂದಿಗೆ 2 ವರ್ಷ: ಪುಸ್ತಕ ಓದುತ್ತಾ ಮೌನಕ್ಕೆ ಶರಣಾದ ದಾಸ: ಆತ್ಮಚರಿತ್ರೆ ಬರೆಯಲಾರಂಭಿಸಿದ...

ದರ್ಶನ್ ಬಂಧನವಾಗಿ ಇಂದಿಗೆ 2 ವರ್ಷ: ಪುಸ್ತಕ ಓದುತ್ತಾ ಮೌನಕ್ಕೆ ಶರಣಾದ ದಾಸ: ಆತ್ಮಚರಿತ್ರೆ ಬರೆಯಲಾರಂಭಿಸಿದ ಪವಿತ್ರಾ ಗೌಡ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೀಡಾಗಿ ಇಂದಿಗೆ ಎರಡು ವರ್ಷ. ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಒಂದು ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

ನಟ ದರ್ಶನ್ ತನ್ನ ಗೆಳತಿ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಸಿದ ಎಂಬ ಕಾರಣಕ್ಕೆ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿಯನ್ನು ಅಪಹರಿಸಿ, ಕೂಡಿಟ್ಟು ಚಿತ್ರಹಿಂಸೆ ನೀಡಿ ಹತ್ಯೆಗೈದಿರುವ ಆರೋಪವಿದೆ. ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.

ದರ್ಶನ್ ಬಂಧನವಾಗಿ ಇಂದಿಗೆ ಎರಡು ವರ್ಷ. ಅವರು ಜೈಲು ಸೇರಿ ಎರಡು ವರ್ಷಗಳಾಗಿದ್ದರೂ ಮಧ್ಯದಲ್ಲಿ ಎಂಟು ತಿಂಗಳ ಕಾಲ ಚಿಕಿತ್ಸೆ ನೆಪವೊಡ್ದಿ ಜೈಲಿನಿಂದ ಹೊರಗಿದ್ದರು. ಬಳಿಕ ಮತ್ತೆ ಜೈಲುಸೇರಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೈತಪ್ಪಿದ ಬಳಿಕ ನಟ ದರ್ಶನ್ ಜೈಲಿನಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಲಿನ ಸೆಲ್ ನಲ್ಲಿ ದರ್ಶನ್ ಹೆಚ್ಚಿನ ಸಮಯ ಪುಸ್ತಕ ಓದುವುದರಲ್ಲಿ ಕಾಲ ಕಳೆಯುತ್ತಿದ್ದು, ಯಾರೊಂದಿಗೂ ಹೆಚ್ಚ್ ಹು ಮಾತು ಕೂಡ ಆಡುತ್ತಿಲ್ಲ. ಒಂಟಿಯಾಗಿ ಮೌನವಾಗಿರಲು ಬಯಸುತ್ತಿದ್ದಾರೆ. ಸಹಕೈದಿಗಳ ಜೊತೆಯಲ್ಲಿಯೂ ಮಾತನಾಡುತ್ತಿಲ್ಲ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ತಮ್ಮ ಆತ್ಮಚರಿತ್ರೆ ಬರೆಯುವಲ್ಲಿ ಮಗ್ನರಾಗಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಅವರು ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ಸಿಲ್ ಪಡೆದು ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು ಹಾಗೂ ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳ ದಿನಚರಿ ಈಗ ಜೈಲಿನಲ್ಲಿ ಸಂಪೂರ್ಣ ವಿಭಿನ್ನವಾಗಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ದರ್ಶನ್ ಸುಪ್ರೀಂಕೋರ್ಟ್​​ನಲ್ಲಿ ಜಾಮೀನು ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್ ಇದಕ್ಕೆ ನಿರಾಕರಿಸಿದೆ. ಒಂದು ವರ್ಷದ ಒಳಗೆ ಪ್ರಮುಖ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಲು ಕೆಳ ಹಂತದ ನ್ಯಾಯಾಲಯಕ್ಕೆ ಗಡುವು ನೀಡಿದೆ. ಒಂದೊಮ್ಮೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳದೆ ಇದ್ದರೆ, ಆ ಬಳಿಕ ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ.

ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟ ದರ್ಶನ್ ತೀವ್ರ ನಿರಾಶರಾಗಿದ್ದಾರೆ. ಇನ್ನು ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಸದ್ಯ ಯಾರ ಜತೆಯೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ವಾರಕ್ಕೊಮ್ಮೆ ಜೈಲಾಡಳಿತ ನೀಡುವ ಮೂರ್ನಾಲ್ಕು ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದಾರೆ. ಒಟ್ಟಾರೆ ಜೈಲು ಸೇರಿದ ಬಳಿಕ ಜಾಮೀನು ವಿಳಂಬವಾಗುತ್ತಿರುವ ಬೆನ್ನಲ್ಲೇ ದರ್ಶನ್ ಸಾಕಷ್ಟು ಬದಲಾಗಿದ್ದಾರೆ ಎನ್ನಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular